ನ್ಯೂಸ್ ನಾಟೌಟ್: ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 2024ರ ಕುಂಭಮಾಸದಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವವನ್ನು ಅವಿಸ್ಮರಣೀಯಗೊಳಿಸಲು ‘ಪ್ರಕೃತಿಗೆ ಹಸಿರು ಹೊದಿಸಿ ಒಂದು ಕಳಿಯಾಟ ಕಾಲ’ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ಏಕಕಾಲಕ್ಕೆ 3000 ಫಲ ವೃಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪೆರ್ಣೆ ಕಳಿಯಾಟ ಮಹೋತ್ಸವ ಸಮಿತಿ ಮತ್ತು ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಪುತ್ತೂರು ಸಂಘದ ವ್ಯಾಪ್ತಿಯಲ್ಲಿ ಪುತ್ತೂರು ವಾಣಿಯನ್/ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಬಿ ಅವರ ಕಲ್ಲರ್ಪೆ ಮನೆಯಲ್ಲಿ ತೆಂಗಿನ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪುತ್ತೂರು ವಾಣಿಯನ್ ಗಾಣಿಗ ಸಮಾಜ ಸೇವಾ ಸಂಘದ ನಿಕಟ ಪೂರ್ವಾಧ್ಯಕ್ಷ ಸುಬ್ಬಪ್ಪ ಪಟ್ಟೆ, ಸ್ಥಾಪಕಾಧ್ಯಕ್ಷ ಹಾಗೂ ಕಳಿಯಾಟ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ತಿಮ್ಮಪ್ಪ ಪಾಟಾಳಿ, ಕಳಿಯಾಟ ಸಮಿತಿ ಕಾರ್ಯದರ್ಶಿ ದಾಮೋದರ ಪಾಟಾಳಿ, ನಿವೃತ್ತ ಯೋಧ ಬಾಲಕೃಷ್ಣ ಪಾಟಾಳಿ, ಸಂಘದ ಪೂರ್ವಾಧ್ಯಕ್ಷ ಶಂಕರ ಪಾಟಾಳಿ, ಕಾರ್ಯದರ್ಶಿ ಜಯಲಕ್ಷ್ಮೀ ಡಿ.ಎಸ್., ಸಂಘಟನಾ ಕಾರ್ಯದರ್ಶಿ ಮನೋಹರ್ ಪುತ್ತೂರು ಉದ್ಯಮಿ ಅರವಿಂದ ಜಾಲ್ಸೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಏಕಕಾಲಕ್ಕೆ 3000 ಫಲ ವೃಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲಾಯಿತು. ಪುತ್ತೂರು ಸಂಘದ ವ್ಯಾಪ್ತಿಗೊಳಪಟ್ಟ ಪುತ್ತೂರು ಹಾಗೂ ಕಡಬ ತಾಲೂಕಿನ 400ಕ್ಕೂ ಅಧಿಕ ವಾಣಿಯನ್/ಗಾಣಿಗ ಸಮಾಜ ಬಾಂಧವರ ಮನೆಯಲ್ಲಿ ಏಕಕಾಲದಲ್ಲಿ 400ಕ್ಕೂ ಅಧಿಕ ಫಲವೃಕ್ಷ ಸಸಿಗಳನ್ನು ನೆಡಲಾಯಿತು.