ನ್ಯೂಸ್ ನಾಟೌಟ್ : ಬೆತ್ತಲೆ ವಿಡಿಯೋ ಕಾಲ್ಗಳನ್ನು ಮಾಡುವಂತೆ ಗಂಡ ಒತ್ತಾಯ ಮಾಡಿ ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬಳು ದೂರು ದಾಖಲಿಸಿರುವ ಘಟನೆಯೊಂದು ವರದಿಯಾಗಿದೆ.ಈ ಘಟನೆ ನಡೆದಿದ್ದು ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಸಂತ್ರಸ್ತ ಮಹಿಳೆಯ ವಯಸ್ಸು 20 ವರ್ಷ ಎಂದು ತಿಳಿದು ಬಂದಿದೆ. ಆಕೆಯ ಪತಿ ಬಂಕಲಂ ಮೂಲದವರೆಂದು ತಿಳಿದು ಬಂದಿದೆ. ಪಾಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ದೂರಿನ ಪ್ರಕಾರ, ಆರೋಪಿ ಗಂಡ ಕೆಲವು ವ್ಯಕ್ತಿಗಳಿಂದ ಹಣ ಪಡೆದುಕೊಂಡು ಈ ರೀತಿ ಒತ್ತಾಯಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ.ಅದಕ್ಕೆ ಪ್ರತಿಯಾಗಿ ತನ್ನ ಪತ್ನಿಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಈ ಒತ್ತಾಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದಕ್ಕಾಗಿ ವಿಡಿಯೋ ಕರೆ ಮಾಡಲು ಹಾಗೂ ಪತ್ನಿಯನ್ನು ನಗ್ನವಾಗಿ ಕಾಣಿಸಿಕೊಳ್ಳಲು ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ,ಮಹಿಳೆಗೆ ಬೆದರಿಕೆ ಹಾಕಿ ಹಲ್ಲೆ ಮಾಡಿರುವ ಆರೋಪವೂ ಆತನ ಮೇಲಿದೆ.ಈ ಘಟನೆಯಿಂದ ಬೇಸತ್ತ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ. ನೀಲೇಶ್ವರಂ ಪೊಲೀಸರು ವ್ಯಕ್ತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣಗಳ ಉಪಯೋಗ ಎಷ್ಟಿದೆಯೋ ಅದನ್ನು ದುರ್ಬಳಕೆ ಮಾಡುತ್ತಿರುವವರ ಸಂಖ್ಯೆಯೂ ಅಷ್ಟೇ ಇದೆ.ಮೊಬೈಲ್ ,ಸೋಶಿಯಲ್ ಮೀಡಿಯಾದಲ್ಲಿಯೇ ಈಗಿನ ಜನರೇಶನ್ ಮುಳುಗಿದೆ.ಮೊಬೈಲ್ಗಳಿಲ್ಲದ ಕಾಲದಲ್ಲಿ ಕೇವಲ ಲೆಟರ್ಗಳ ಮೂಲಕ ಜನ ಯೋಗ ಕ್ಷೇಮ ವಿಚಾರಿಸುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ.ಮೊಬೈಲ್ , ಸೋಶಿಯಲ್ ಮೀಡಿಯಾ ಹಾವಳಿಯಿಂದಾಗಿ ಈ ರೀತಿಯ ಘಟನೆಗಳು ಮರುಕಳಿಸ್ತಾ ಇರೋದು ದುರಂತವೇ ಸರಿ.