ನ್ಯೂಸ್ ನಾಟೌಟ್: ನದಿಯೊಂದರಲ್ಲಿ ದೋಣಿ ವಿಹಾರ ಮಾಡೋದಂದ್ರೆನೆ ಭಯ.ಅದ್ರಲ್ಲೂ ಒಂದು ಮೊಸಳೆ ಕಣ್ಣಿಗೆ ಕಾಣಿಸಿ ಕೊಂಡ್ರೆ ಜೀವ ಕುತ್ತಿಗೆಗೆ ಬಂದು ನಿಲ್ಲುತ್ತೆ. ಆದರೆ ಇಲ್ಲೊಂದು ವಿಡಿಯೊದಲ್ಲಿ ದೋಣಿ ವಿಹಾರ ಮಾಡುವವರಿಗೆ ಭಯಂಕರ ಡೇರಿಂಗ್ ಬೇಕಾಗುತ್ತದೆ.ಯಾಕೆಂದರೆ ಒಂದಲ್ಲ, ಎರಡಲ್ಲ, ನೂರಾರು ಮೊಸಳೆಗಳ ಮೇಲೆ ದೋಣಿ ವಿಹಾರ ಮಾಡ್ತಾರೆ..!
ಆದರೆ ವಿಶೇಷವೆಂದರೆ ಈ ಮೊಸಳೆಗಳನ್ನು ಕಂಡಾಗ ಎಂತವರಿಗೂ ಭಯ ತರಿಸುವಂತಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್ (Viral Video) ಆಗಿದೆ.ಸಣ್ಣದೊಂದು ನದಿಯಲ್ಲಿ ಮೋಟಾರ್ ಚಾಲಿತ ದೋಣಿ ಸಾಗುತ್ತಿದೆ.ನದಿ ಮಧ್ಯೆಯೇ ನೂರಾರು ಮೊಸಳೆಗಳು ವಾಸ ಮಾಡುತ್ತಿದ್ದು,ದೋಣಿ ಮೋಟಾರ್ ಸದ್ದು ಮಾಡುತ್ತಾ ಹೋದಂತೆ ಮೊಸಳೆಗಳು ಆ ಸದ್ದಿಗೆ ಹೆದರಿ ನದಿ ದಡ ಹಾರಿ ಬೀಳುತ್ತಿವೆ.
ಆದರೆ ಈ ಮೊಸಳೆಗಳನ್ನು ಕಂಡಾಗ ದೋಣಿಯವರಿಗೆ ಒಂಚೂರು ಭಯನೇ ಆಗೋದಿಲ್ಲ.ಆರಾಮವಾಗಿ ನದಿಯಲ್ಲಿ ಮೀನುಗಳಿವೆಂದು ಭಾವಿಸಿಕೊಂಡೇ ದೋಣಿಯಲ್ಲಿ ಪ್ರಯಾಣಿಸುವುದನ್ನು ನೋಡಿದಾಗ ಮೈ ರೋಮಾಂಚನವಾಗುತ್ತದೆ.ದೋಣಿಯಲ್ಲಿರುವ ವ್ಯಕ್ತಿ ಯಾವುದೋ ಭಾಷೆಯಲ್ಲಿ ಏನೋ ಮಾತನಾಡುತ್ತಾ ಅರಾಮವಾಗಿ ಸಾಗುತ್ತದೆ. ಚೂರೂ ಭಯವಿಲ್ಲದೆ ಈ ರೀತಿ ಮೊಸಳೆಗಳ ಮೇಲೆ ದೋಣಿಯನ್ನು ಸಾಗಿಸುವ ವಿಡಿಯೊವನ್ನು ಸೆರೆ ಹಿಡಿಯಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಸಿಸಿಟಿವಿ ಈಡಿಯಟ್ಸ್ ಟ್ವಿಟರ್ ಖಾತೆಯವರು ಈ ವಿಡಿಯೊವನ್ನು ಹಂಚಿಕೊಂಡಿದ್ದು,ಆಗಸ್ಟ್ 16ರಂದು ಹಂಚಿಕೊಂಡಿದ್ದಾರೆ.ಇದಕ್ಕೆ ಚಂದದ ಟೈಟಲ್ “ಭಯಾನಕ ನದಿಯಲ್ಲಿ ದೋಣಿ ಸಾಗುವುದು” ಎಂದು ವಿಡಿಯೊಗೆ ಕ್ಯಾಪ್ಶನ್ ಕೊಡಲಾಗಿದೆ.ಇದನ್ನು ಲಕ್ಷಾನುಗಟ್ಟಲೆ ಮಂದಿ ವೀಕ್ಷಿಸಿದ್ದಾರೆ. 11 ನೂರಾರು ಜನರು ವಿಡಿಯೊ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
“ಅಲ್ಲಿ ಎಷ್ಟು ಮೊಸಳೆಗಳಿವೆ? ಅವುಗಳನ್ನು ಲೆಕ್ಕ ಹಾಕುವ ಧೈರ್ಯ ಯಾರಿಗಾದರೂ ಇದಿಯಾ?”, “ಒಂದು ವೇಳೆ ಆ ನದಿಯೊಳಗೆ ನಾವು ಬಿದ್ದರೆ ನಮ್ಮ ಸ್ಥಿತಿ ಏನಾಗಬಹುದು?”, “ಇದು ಎಲ್ಲಿ ಚಿತ್ರೀಕರಿಸಿರುವ ವಿಡಿಯೊ?”, “ಯಾವ ನದಿಯಲ್ಲಿ ಇಷ್ಟೊಂದು ಮೊಸಳೆಗಳಿರುವುದು?” ಎನ್ನುವಂತಹ ಕಾಮೆಂಟ್ಗಳು ವಿಡಿಯೊಗೆ ಬಂದಿವೆ.ಒಡಿಶಾದಲ್ಲಿ ಮೊಸಳೆಯೊಂದು ನದಿ ದಡದಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಹೋಗಿ ತಿಂದಿದ್ದ ದೃಶ್ಯ ಬಾರಿ ವೈರಾಲಾಗಿತ್ತು.ಆ ವಿಡಿಯೊವನ್ನು ಕಂಡ ಜನರು ಕಂಗಾಲಾಗಿದ್ದರು.ಇದರ ಬೆನ್ನಲ್ಲೇ ಈ ವಿಡಿಯೋ ನೋಡಿ ಹುಬ್ಬೇರಿಸಿದ್ದಾರೆ.