ನ್ಯೂಸ್ ನಾಟೌಟ್: ದುಷ್ಕರ್ಮಿಗಳ ಕಾಮದ ಕಣ್ಣಿಗೆ ಬಲಿಯಾದ ಸೌಜನ್ಯ ಹಂತಕರ ಬಂಧನವಾಗಬೇಕು ಅನ್ನುವ ಒತ್ತಾಯ ಹೆಚ್ಚುತ್ತಿದೆ. ಈ ನಡುವೆ ಸೌಜನ್ಯ ಕೊಲೆಗಾರರಿಗೆ 48 ದಿನದೊಳಗೆ ಶಿಕ್ಷೆಯಾದರೆ ಅಗೆಲು ಸೇವೆ ನೀಡುವುದಾಗಿ ಸೌಜನ್ಯ ಅಣ್ಣ ತಮ್ಮಂದಿಗ ಬಳಗ ಸುಳ್ಯದ ವತಿಯಿಂದ ಅರಂತೋಡು ಕೊಡಂಕೇರಿ ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಸೌಜನ್ಯ ಬದುಕಿ ಬಾಳಬೇಕಿದ್ದ ಹುಡುಗಿ. ಆಕೆಯನ್ನು ಅಮಾನುಷವಾಗಿ ಚಿತ್ರಹಿಂಸೆ ಮಾಡಿ ಕೊಲ್ಲಲಾಗಿದೆ. ಆಕೆಯ ಸಾವಿಗೆ ಕಾರಣವಾದ ಶಕ್ತಿಗಳನ್ನು ಕೂಡಲೇ ಬಂಧನವಾಗಬೇಕು. ಸ್ವಾಮಿ ಕೊರಗಜ್ಜ ಈ ನಿಟ್ಟಿನಲ್ಲಿ ತಮ್ಮ ದಿವ್ಯ ದೃಷ್ಟಿಯನ್ನು ಹರಿಸಿ ಅಪರಾಧಿಗಳ ಬಂಧನವಾಗುವಂತೆ ಮಾಡಬೇಕು. ಅಂದುಕೊಂಡದ್ದು ನಡೆದರೆ ಅಜ್ಜನಿಗೆ ಅಗೆಲು ಸೇವೆ ನೀಡುವುದಾಗಿ ಸೌಜನ್ಯ ಅಣ್ಣ ತಮ್ಮಂದಿಗ ಬಳಗ ಪ್ರಾರ್ಥನೆ ಮಾಡಿಕೊಂಡಿದೆ.