ನ್ಯೂಸ್ ನಾಟೌಟ್ : ನೀವು ತರಕಾರಿ ಖರೀದಿಸುವಾಗ ತರಕಾರಿಯನ್ನು ಪರಿಶೀಲಿಸಿದೇ ಬ್ಯಾಗ್ನೊಳಗೆ ತುಂಬಿಸುವ ಅಭ್ಯಾಸವಿದ್ದರೆ ಇಂದೇ ಬದಲಾವಣೆ ಮಾಡಿಕೊಳ್ಳೋದು ಉತ್ತಮ. ಏಕೆಂದರೆ ಯಾವ ಸಂದರ್ಭ ಹೇಗಿರುತ್ತೆ ಅನ್ನೋದನ್ನು ಯಾರು ಊಹಿಸಲು ಸಾಧ್ಯವಿಲ್ಲ.ಅದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.
ಮಳೆಗಾಲದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೊಳ್ಳುವಾಗ ಎಷ್ಟು ಎಚ್ಚರವಾಗಿರುತ್ತಿರೋ ಅಷ್ಟು ಒಳ್ಳೆಯದು. ಅದರಲ್ಲೂ ಕೋಸು, ಹೂಕೋಸು, ಪಾಲಕ್ ಸೇರಿದಂತೆ ಸೊಪ್ಪು ತರಕಾರಿಗಳನ್ನು ಕೊಳ್ಳುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಸೂಕ್ತ. ಯಾಕೆಂದರೆ ಇಲ್ಲೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸಿನಲ್ಲಿ ಹಾವೊಂದು ಪ್ರತ್ಯಕ್ಷವಾಗಿದೆ.
ಆಶ್ಚರ್ಯವಾದರೂ ಇದು ಸತ್ಯ. ಪದಾರ್ಥ ಮಾಡಲು ಹೂಕೋಸು ತೆಗೆದ ವೇಳೆ ಅದರೊಳಗೆ ಸಣ್ಣ ಹಾವು ಅವಿತು ಕುಳಿತಿರುವುದನ್ನು ಕಂಡು ಮಹಿಳೆ ಗಾಬರಿಗೊಂಡಿದ್ದಾರೆ.ಏನೋ ಅಲ್ಲೇ ನೋಡಿದ ಪರಿಣಾಮ ಯಾವುದೇ ಅಪಾಯ ಸಂಭವಿಸಲಿಲ್ಲ. ಇಲ್ಲಿ ಸ್ವಲ್ಪ ಯಾಮಾರಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ.
ತರಕಾರಿ ಕಟ್ ಮಾಡುವ ಭರದಲ್ಲಿ ಹರಿತವಾದ ಚಾಕುವಿನಿಂದ ಕಟ್ ಮಾಡುವ ವೇಳೆ ಎಲ್ಲಿಯಾದರೂ ಹಾವಿಗೆ ತಾಕಿದರೂ ತೊಂದರೆ ಅಲ್ಲದೆ ಹಾವೇ ನಮ್ಮ ಕೈಗೆ ಕಚ್ಚುವ ಸಂದರ್ಭವೂ ಹೆಚ್ಚು ಹಾಗಾಗಿ ಜಾಗ್ರತೆ ಮಾಡಿಕೊಳ್ಳುವುದು ಸೂಕ್ತ.ಹೀಗಾಗಿ ಜನ ಎಚ್ಚರವಹಿಸಿಕೊಳ್ಳುವುದು ಒಳಿತು.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ದೇವೇಂದ್ರ ಸೈನಿ ಎಂಬವರು ಶೇರ್ ಮಾಡಿರುವ ವಿಡಿಯೋ ಸಕತ್ ವೈರಲ್ ಆಗಿದೆ.ಅದರಲ್ಲಿ ವ್ಯಕ್ತಿಯೊಬ್ಬರು ಮಾರುಕಟ್ಟೆಯಲ್ಲಿ ಖರೀದಿಸಿದ ಹೂಕೋಸನ್ನು ಪದಾರ್ಥ ಮಾಡಲು ಬಿಡಿಸಿದ ವೇಳೆ ಅದರೊಳಗೆ ಸಣ್ಣ ಹಾವು ಕಾಣಸಿಕ್ಕಿದೆ. ಅಲ್ಲದೆ ಆ ಹಾವು ಹೂಕೋಸಿನ ಪದರಗಳಲ್ಲಿ ಸಲೀಸಾಗಿ ಅವಿತು ಕೂತಿರುವುದು ವಿಡಿಯೋದಲ್ಲಿ ಕಾಣಬಹುದು.
ಮಳೆಗಾಲ ಸಮಯವಾದ್ದರಿಂದ ನಾವು ಯಾವುದೇ ವಸ್ತುಗಳನ್ನು ಮುಟ್ಟುವಾಗಲೂ ಯೋಚನೆ ಮಾಡಬೇಕಾಗುತ್ತೆ.ಕೆಲವೊಂದು ಸಂದರ್ಭದಲ್ಲಿ ಶೂಗಳಲ್ಲಿ ಕೂಡ ಹಾವುಗಳು ಹುದುಗಿರುವ ಬಗ್ಗೆ ವರದಿಯಾಗಿದ್ದವು. ಹೀಗಾಗಿ ತರಕಾರಿ ಖರೀದಿಸುವಾಗಲೇ ಪರಿಶೀಲಿಸುವ ಅಗತ್ಯವಿದೆ.