ನ್ಯೂಸ್ ನಾಟೌಟ್ : ನಮಗಿಷ್ಟವಾದ ವಸ್ತುಗಳನ್ನು ಖರೀದಿಸಲು ಹಾಗೂ ನಾವಿಷ್ಟಪಟ್ಟಿರೋದನ್ನು ತಿನ್ನೋದಕ್ಕೆ , ನಮ್ಮ ಕನಸುಗಳನ್ನು ಈಡೇರಿಸಲು ಹಣದ ಅವಶ್ಯಕತೆ ತುಂಬಾನೇ ಇದೆ.ಆದರೆ ಖಾತೆಯಲ್ಲಿ ಹಣವಿಲ್ಲವೆಂದ್ರೆ ಏನೋ ಒಂದು ಬೋರು.ಆದರೆ ಇಲ್ಲೊಂದು ಕಡೆ ಖಾತೆಯಲ್ಲಿ ಹಣವಿಲ್ಲದಿದ್ದರೂ ಎಟಿಎಮ್ ನಲ್ಲಿ ಹಣ ಬರುತ್ತೆ . ಅರೇ! ಇದು ಹೇಗೆ ?
ಇಂತಹ ಅದೃಷ್ಟಕ್ಕೆ ಈ ಒಂದು ನಗರ ಸಾಕ್ಷಿಯಾಗಿದೆ. ಇದನ್ನು ಕಂಡು ಜನ ಓಡೋಡಿ ಬಂದು ಎಟಿಎಮ್ ಮುಂದೆ ಕ್ಯೂ ನಿಂತಿದ್ದಾರಂತೆ.ಈ ಘಟನೆ ನಡೆದಿರೋದು ಭಾರತದಲ್ಲಲ್ಲ, ಐರ್ಲೆಂಡ್ ನಲ್ಲಿ.
ಅಂದು ಖಾತೆಯಲ್ಲಿ ಕಡಿಮೆ ಬ್ಯಾಲೆನ್ಸ್ ಹೊಂದಿದ್ದ ವ್ಯಕ್ತಿ ಎಟಿಎಮ್ಗೆ ಬಂದಿದ್ದ.ಈ ವೇಳೆ ಆತನಿಗೆ 90 ಸಾವಿರ ರೂ. ಬಂದಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಎಟಿಎಂ ಕೇಂದ್ರಗಳಿಗೆ ಜನ ಜಮಾಯಿಸಿದ್ದಾರೆ. ಹಣ ಪಡೆದಿರುವುದಲ್ಲದೇ ಹಣವನ್ನು ಬೇರೆಯವರಿಗೆ ವರ್ಗಾವಣೆ ಕೂಡ ಮಾಡಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ಐರ್ಲೆಂಡ್ನ ಬ್ಯಾಂಕ್ ಒಂದರ ಎಟಿಎಂ ಕೇಂದ್ರದಲ್ಲಿ ನಡೆದಿದೆ. ಖಾತೆಯಲ್ಲಿ ಹಣವಿಲ್ಲದಿದ್ದರೂ ಹಣ ವಿತ್ಡ್ರಾ ಆಗಿದ್ದು ವಿಶೇಷ. ಇದನ್ನು ಕಂಡು ಜನ ದಂಗಾಗಿದ್ದಾರೆ.
ಖಾತೆಯಲ್ಲಿ ಹಣವಿಲ್ಲದಿದ್ದರೂ ಕೂಡ ಅಷ್ಟೊಂದು ಹಣ ಹೇಗೆ ಬಂತು ಅನ್ನೋದಕ್ಕೆ ಕಾರಣ ಕೇಳಿದಾಗ ಬ್ಯಾಂಕ್ ವ್ಯವಸ್ಥೆಯಲ್ಲಿನ ತಾಂತ್ರಿಕ ವೈಫಲ್ಯ ಬಲವಾದ ಕಾರಣವಾಗಿತ್ತು. ಬ್ಯಾಂಕ್ ಗ್ರಾಹಕರು ಖಾತೆಯಲ್ಲಿ ಹಣವಿಲ್ಲದಿದ್ದರೂ 1000 ಯೂರೋ (ಭಾರತೀಯ ಕರೆನ್ಸಿ ಪ್ರಕಾರ 90 ಸಾವಿರ ರೂ.) ವರೆಗೂ ಹಣ ವಿತ್ಡ್ರಾ ಮಾಡುವ ಅವಕಾಶ ದೊರೆತಿತ್ತು ಎಂದು ತಿಳಿದು ಬಂದಿದೆ.
ವಿಚಾರ ತಿಳಿಯುತ್ತಿದ್ದಂತೆ ಸುತ್ತಲ ಪ್ರದೇಶಗಳಿಗೆ ಹರಡಿತ್ತು.ಗ್ರಾಹಕರು ಎಟಿಎಮ್ ನತ್ತ ಧಾವಿಸಿ ಬಂದರು. ಎಟಿಎಂ ಕೇಂದ್ರದ ಮುಂದೆ ಜಮಾಯಿಸಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಕಾರುಗಳನ್ನು ಪಾರ್ಕ್ ಮಾಡಿ ಎಟಿಎಂ ಮುಂದೆ ಸಾಲುಗಟ್ಟಿ ಜನರು ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸದ್ಯ ಈ ಕುರಿತಂತೆ ಭಾರಿ ಚರ್ಚೆಗಳು ಕೂಡ ನಡೆದಿದ್ದವು. ಐರ್ಲೆಂಡ್ ರಾಜಧಾನಿ ಡಬ್ಲಿನ್, ಲೈಮರಿಕ್, ದುಂಡಾಲ್ಕ್ ಸೇರಿದಂತೆ ದೇಶದ ಹಲವು ಭಾಗಗಳ ಕೆಲ ಜನರು ಈ ಲಾಭವನ್ನು ಪಡೆದುಕೊಂಡಿದ್ದಾರೆ. ಎಟಿಎಂ ಕೇಂದ್ರಗಳಲ್ಲಿ ಪೊಲೀಸರಿದ್ದರೂ ಡೋಂಟ್ ಕೇರ್ ಎನ್ನದ ಗ್ರಾಹಕರು ಹಣ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಗ್ರಾಹಕನೊಬ್ಬ ತಾನು 1000 ಯುರೋಗಳನ್ನು ಹಿಂಪಡೆದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರೆ. ಇನ್ನೋರ್ವ 500 ಯುರೋಗಳನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಂದು ಗ್ರಾಹಕರಿಗೆ ಹಣದ ಸುರಿಮಳೆಯೇ ಹರಿದು ಬಂದಿದೆ. ಮೊಬೈಲ್ ಅಪ್ಲಿಕೇಶನ್ನಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅಲ್ಲೂ ಕೂಡ ಅನೇಕ ಮಂದಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರೆ, ಉಚಿತ ಹಣ ಸಿಕ್ಕಿತ್ತೆಂದು ಸಂತೋಷಪಡುವ ಮುನ್ನವೇ ಬ್ಯಾಂಕ್ ಪ್ರಮುಖ ಘೋಷಣೆಯೊಂದನ್ನು ಮಾಡಿದೆ.
ಇದನ್ನು ಕೇಳಿ ಶಾಕ್ ಆದ ಗ್ರಾಹರಿಗೆ ಶಾಕ್ ಆಗಿದೆ. ಸಿಕ್ಕಿರುವ ಹಣವನ್ನು ಮರುಪಾವತಿ ಮಾಡಿ. ಇಲ್ಲವಾದಲ್ಲಿ ನಿಮ್ಮ ಖಾತೆಗಳಿಂದ ಹಣವನ್ನು ಕಡಿತ ಮಾಡಿಕೊಳ್ಳುತ್ತೇವೆ ಎಂಬ ಸೂಚನೆಗೆ ಬೆರಗಾಗಿದ್ದಾರೆ. ಈ ಸೂಚನೆಗೂ ನೀವು ಗಮನ ಕೊಡದೇ ಇದ್ದಲ್ಲಿ ಮುಂದೆ ಪೊಲೀಸ್ ಕ್ರಮ ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.