ನ್ಯೂಸ್ ನಾಟೌಟ್: ತಾಯಿಯ ಎದೆಹಾಲು ಮಗುವಿನ ಗಂಟಲಿನಲ್ಲಿಯೇ ಉಳಿದುಕೊಂಡ ಪರಿಣಾಮ ಮೂರು ತಿಂಗಳ ಮಗು ದಾರುಣವಾಗಿ ಕೊನೆಯುಸಿರೆಳೆದಿರುವ ಘಟನೆ ಕಂಡಿರುವ ಘಟನೆ ಕೇರಳ ತಿರುನವಂತಪುರದ ಪಲ್ಲಿಚಾಲ್ನಲ್ಲಿ ಮಂಗಳವಾರ ನಡೆದಿದೆ.
ಕಳೆದ ಮಾರ್ಚ್ನಲ್ಲಿಯೂ ಕೇರಳದಲ್ಲಿ ಒಂದು ತಿಂಗಳ ಮಗು ಎದೆಹಾಲು ಕುಡಿಯುವಾಗಲೇ ತಲೆಗೆ ಏರಿದ್ದರಿಂದ ಸಾವು ಕಂಡಿತ್ತು. ಈ ಸಾವಿನಿಂದ ನೊಂದ ಮಹಿಳೆ ತನ್ನ ಹಿರಿಯ ಪುತ್ರನೊಂದಿಗೆ ಬಾವಿಗೆ ಹಾರಿ ಜೀವ ಕಳೆದುಕೊಂಡಿದ್ದರು. ಈಗ ಇಂತಹದ್ದೇ ಮತ್ತೊಂದು ಘಟನೆ ವರದಿಯಾಗಿದ್ದು, ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಯ ಪುತ್ರನಾಗಿದ್ದ ಜಿತೇಶ್ ಪುಟ್ಟ ಶಿಶು ಸಾವನ್ನಪ್ಪಿದೆ.
ಕೆಲ ವರ್ಷದ ಹಿಂದೆ ಮದುವೆಯಾಗಿದ್ದ ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಗೆ ಜಿತೇಶ್ ಮೊದಲ ಮಗುವಾಗಿತ್ತು. ಭಾನುವಾರ ಸಂಜೆ ಜಾನಿಮೋಳ್ ಮಗುವಿಗೆ ಎದೆಹಾಲು ಕುಡಿಸಿ ಮಲಗಿಸಿದ್ದರು. ಸೋಮವಾರ ಬೆಳಗ್ಗೆಯಾದರೂ ಮಗು ಏನೂ ಗದ್ದಲ ಮಾಡದೇ, ಇದ್ದ ಸ್ಥಳದಿಂದ ಒಂಚೂರು ಕದಲದೇ ಇದ್ದಾಗ ದಂಪತಿಗಳಿಗೆ ಅನುಮಾನ ಶುರುವಾಗಿತ್ತು. ತಕ್ಷಣವೇ ದಂಪತಿಗಳು ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ದರು.
ಈ ಹಂತದಲ್ಲಿ ಮಗುವಿನ ಪಲ್ಸ್ ಬಹಳ ಕಡಿಮೆ ಇತ್ತು ಎಂದು ವೈದ್ಯರು ತಿಳಿಸಿದ ಕಾರಣ, ಮಗುವನ್ನು ಎಸ್ಐಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಮಗುವಿಗೆ ತೀವ್ರ ಚಿಕಿತ್ಸೆ ನೀಡುತ್ತಿದ್ದ ನಡುವೆಯೂ ಸೋಮವಾರ ಸಂಜೆ 6 ಗಂಟೆಯ ವೇಳೆ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಾಯಿಯ ಎದೆಹಾಲು ಗಂಟಲಿನಲ್ಲಿ ಮಾತ್ರವಲ್ಲದೆ, ಶ್ವಾಸಕೋಶದಲ್ಲಿಯೂ ತುಂಬಿಕೊಂಡ ಕಾರಣದಿಂದಾಗಿ ಮಗು ಕೊನೆಯುಸಿರೆಳೆದಿದೆ.