ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವರ ದರ್ಶನಕ್ಕೆಂದು ಹೋದ ಮೈಸೂರಿನ ಹಲವು ಮಂದಿ ಸುಳ್ಯದ ಬಸ್ ಸ್ಟ್ಯಾಂಡ್ ನಲ್ಲೇ ಸತತ 5 ಗಂಟೆಯಿಂದ ಬಾಕಿಯಾಗಿದ್ದಾರೆ. ಬಸ್ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಯಾರೂ ಕೂಡ ಇವರ ಗೋಳನ್ನು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಪುಟ್ಟ ಮಕ್ಕಳು ಸಹಿತ ಹಲವು ಮಹಿಳೆಯರು ಕೂಡ ಇರುವುದರಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆಹೋದವರು ಸುಳ್ಯಕ್ಕೆ ಬಂದಿದ್ದೇಕೆ..?
ಕುಕ್ಕೆ ಸುಬ್ರಹ್ಮಣ್ಯಕ್ಕೆಹೋದವರು ಸುಳ್ಯಕ್ಕೆ ಬಂದಿದ್ದೇಕೆ ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಟಿಸಿಯೊಬ್ಬರು ಮೈಸೂರಿಗೆ ಹೋಗಲು ಸುಳ್ಯದಿಂದ ಹಲವು ಬಸ್ ಗಳು ಆಗಾಗ್ಗೆ ಬರುತ್ತಿರುತ್ತದೆ. ಹಾಗಾಗಿ ನೀವು ಸುಳ್ಯಕ್ಕೆ ಹೋಗಿ ಎಂದಿದ್ದಾರೆ. ಹಾಗಾಗಿ ಹೆಚ್ಚಿನ ಜನ ಸುಳ್ಯಕ್ಕೆ ಬಂದಿದ್ದಾರೆ. ಆದರೆ ಸುಳ್ಯಕ್ಕೆ ಸಂಜೆ 5 ಗಂಟೆಗೆ ಪ್ರಯಾಣಿಕರು ಬಂದರೂ ಕೂಡ ಇಲ್ಲಿವರೆಗೆ ಮೈಸೂರಿಗೆ ಹೋಗುವುದಕ್ಕೆ ಸಾಧ್ಯವಾಗಿಲ್ಲ. ಬಸ್ ಬಂದರೂ ಕೂಡ ಅದರಲ್ಲಿ ಸೀಟ್ ಇಲ್ಲ ಅನ್ನುವ ಉತ್ತರ ಬರುತ್ತಿದೆ.
ಇದರಿಂದ ಪ್ರಯಾಣಿಕರು ಬಹಳಷ್ಟು ಬೇಸರಕ್ಕೆ ಒಳಗಾಗಿದ್ದಾರೆ. ಇಷ್ಟು ಪ್ರಯಾಣಿಕರು ನಾವು ಇಲ್ಲಿ ಇರುವಾಗ ಪ್ರತ್ಯೇಕ ವ್ಯವಸ್ಥೆಯನ್ನಾದರೂ ಮಾಡಬೇಕು. ಬಸ್ ಸ್ಟ್ಯಾಂಡ್ ನಲ್ಲಿ ಲೈಟ್ ಬೇರೆ ಆಫ್ ಮಾಡಲಾಗಿದೆ. ಕತ್ತಲಲ್ಲಿ ಉಳಿದುಕೊಳ್ಳುವುದಕ್ಕೂ ಕಷ್ಟವಾಗುತ್ತಿದೆ. ಸಣ್ಣ ಮಕ್ಕಳಿದ್ದಾರೆ. ಮಹಿಳೆಯರಿದ್ದಾರೆ ಯಾರಾದರೂ ಸಹಾಯ ಮಾಡಿ ಎಂದು ಪ್ರಯಾಣಿಕರೊಬ್ಬರು ನ್ಯೂಸ್ ನಾಟೌಟ್ ಜೊತೆಗೆ ಮನವಿ ಮಾಡಿದ್ದಾರೆ. ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರಿಗೆ ಅಧಿಕಾರಿಗಳು ಸಹಾಯ ಮಾಡಬೇಕಿರುವ ಅನಿವಾರ್ಯತೆ ಇದೆ.