ನ್ಯೂಸ್ ನಾಟೌಟ್ : ಪಬ್ಜಿ ಆನ್ಲೈನ್ ಗೇಮ್ ಆಡುತ್ತಲೇ ಭಾರತದ ಯುವಕನೊಂದಿಗೆ ಪರಿಚಯ ಬೆಳೆಸಿಕೊಂಡಿದ್ದ ಪಾಕಿಸ್ತಾನದ 4 ಮಕ್ಕಳ ತಾಯಿ ಆತನನ್ನು ಭಾರತಕ್ಕೆ ಬಂದು ಭೇಟಿಯಾದ ಸುದ್ದಿ ಭಾರಿ ವೈರಲಾಗಿತ್ತು.ಇದೀಗ ಆಕೆ ಭಾರತದ ತಿರಂಗಾ ಹಾರಿಸಿ ‘ಭಾರತ್ ಮಾತಾಕಿ ಜೈ’ ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ ಹಾಗೂ ಸಚಿನ್ ಮೀನಾ (Sachin Meena) ಉತ್ತರ ಪ್ರದೇಶದಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಅವರೀಗ ಭಾರತದ ಹಿಂದು ಆಚರಣೆಗಳನ್ನು ಅನುಸರಿಸುತ್ತಿದ್ದಾರೆ. ಸೀಮಾ ಹೈದರ್ ಕೂಡ ನಾನು ಭಾರತೀಯಳು ಎಂದು ಹೇಳಿಕೊಂಡಿದ್ದು,ಇಲ್ಲಿನ ಸಂಪ್ರದಾಯದ ಬಗ್ಗೆಯೂ ಆಕೆ ಸಂತಸ ವ್ಯಕ್ತ ಪಡಿಸಿದ್ದಾಳೆ.ನಾಳೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಹೀಗಾಗಿ ಇಡೀ ದೇಶದಾದ್ಯಂತ ಇದಕ್ಕಾಗಿ ಸಿದ್ದತೆಗಳು ನಡಿತಿವೆ. ಇದರ ಬೆನ್ನಲ್ಲೇ, ಭಾರತದ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ಸೀಮಾ ಹೈದರ್ ಅವರು ತ್ರಿವರ್ಣ ಧ್ವಜ ಹಾರಿಸಿ, ಭಾರತ್ ಮಾತಾ ಕಿ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಮಂಗಳವಾರದಂದು ಸ್ವಾತಂತ್ರ್ಯ ದಿನಾಚರಣೆ ಇರೋಂದ್ರಿಂದ ಸಂಭ್ರಮ ಮುಗಿಲು ಮುಟ್ಟಿದೆ. ಈ ಹಿನ್ನಲೆಯಲ್ಲಿ ಭಾನುವಾರದಂದು (ಆಗಸ್ಟ್ 13) ಗ್ರೇಟರ್ ನೊಯ್ಡಾದ ಮನೆಯ ಮೇಲೆ ಸೀಮಾ ಹೈದರ್, ಆಕೆ ಪತಿ ಸಚಿನ್ ಮೀನಾ ಹಾಗೂ ಸ್ಥಳೀಯರು ಸೇರಿ ತಿರಂಗಾ ಹಾರಿಸಿದ್ದಾರೆ. ತಿರಂಗಾ ಹಾರಿಸಿದ ಬಳಿಕ ಸೀಮಾ ಹೈದರ್ ಅವರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಸೇರಿ ಹಲವು ಘೋಷಣೆ ಕೂಗಿದ್ದಾರೆ. ಹಾಗೆಯೆ, ಅವರು ಪಾಕಿಸ್ತಾನ್ ಮುರ್ದಾಬಾದ್ ಎಂದು ಘೋಷಣೆ ಕೂಗಿದ ವಿಡಿಯೊ ಕೂಡ ವೈರಲ್ ಅಗಿದೆ.
ಯಾವಾಗ ಸೀಮಾ ಹೈದರ್ ಭಾರತಕ್ಕೆ ಪ್ರವೆಶಿಸಿದರೋ ಅಂದಿನಿಂದ ಆಕೆ ನಾನು ಭಾರತೀಯಳು ಅನ್ನೋದನ್ನು ಹೇಳಿಕೊಂಡೇ ಬಂದಿದ್ದಾರೆ.ನಾನು ಈ ದೇಶವನ್ನು ಪ್ರೀತಿಸುತ್ತೇನೆ. ನಾನು ಇಲ್ಲಿಯೇ ಇರುತ್ತೇನೆ. ಹಿಂದುತ್ವವನ್ನು ನಾನು ಅಳವಡಿಸಿಕೊಂಡಿದ್ದೇನೆ. ನಾನು ಹಿಂದು ಧರ್ಮದ ಮೌಲ್ಯಗಳನ್ನು ಸ್ವೀಕರಿಸುತ್ತೇನೆ. ನಾನೀಗ ಮಾಂಸಾಹಾರ ಸೇವನೆಯನ್ನು ನಿಲ್ಲಿಸಿದ್ದೇನೆ” ಎಂದು ಸೀಮಾ ಹೈದರ್ ಹೇಳಿದ್ದಾರೆ. ಹಾಗೆಯೇ, ನಮ್ಮ ಮದುವೆಯನ್ನು ಸರ್ಕಾರ ಮಾನ್ಯ ಮಾಡಿ, ನನಗೆ ಪೌರತ್ವ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ, ಸೀಮಾ ಹೈದರ್ ಅವರು ಸಚಿನ್ ಸಿಂಗ್ ಮನೆಯಲ್ಲಿಯೇ ವಾಸವಿದ್ದಾರೆ.
ನಿಮ್ಗೆಲ್ಲಾ ತಿಳಿದಿರುವಂತೆ ಇಡೀ ವಿಶ್ವವನ್ನೇ ಕೊರೋನಾ ಎಂಬ ಹೆಮ್ಮಾರಿ ತಲ್ಲಣಗೊಳಿಸುವಂತೆ ಮಾಡಿತ್ತು.ಹೆಚ್ಚಿನ ಜನರು ಆನ್ ಲೈನ್ನಲ್ಲೇ ಕಾಲ ಕಳೆಯುವಂತಾಯಿತು.ಕೆಲವರು ವರ್ಕ್ ಫ್ರಮ್ ಹೋಮ್ ಮೊರೆ ಹೋದ್ರೆ ಇನ್ನೂ ಕೆಲವರು ಆನ್ ಲೈನ್ ಮೂಲಕ ಬೇರೆ ಬೇರೆ ಅವಕಾಶಗಳನ್ನು ಪಡೆದುಕೊಂಡರು. ಶಾಲಾ ಮಕ್ಕಳು ಆನ್ ಲೈನ್ ಕ್ಲಾಸ್ ನತ್ತ ಮುಖ ಮಾಡಿದರು.ಇದರ ಹೊರತಾಗಿ ಕೆಲವರು ಸಾಮಾಜಿಕ ತಾಲಜಾಣಗಳಲ್ಲಿ ತಲ್ಲೀನರಾದರು.ಹೀಗೆ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪಬ್ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ.
ಬಳಿಕ ಇವರಿಬ್ಬರ ಪರಿಚಯ ಪ್ರೀತಿಗೆ ತಲುಪಿತು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಸೀಮಾ ಹೈದರ್ ಅವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದ್ದ ತಮ್ಮ ಮನೆ ಮಾರಿ, ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ಅವರಿಗೆ ಆಶ್ರಯ ನೀಡಿದ ಕಾರಣ ಸೀಮಾ ಹೈದರ್, ಆಕೆಯ ನಾಲ್ಕು ಮಕ್ಕಳು, ಸಚಿನ್ ಮೀನಾ ಹಾಗೂ ಆತನ ತಂದೆಯನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿ ಇರಬಹುದು ಎಂಬ ಶಂಕೆಯಿಂದ ಎಟಿಎಸ್ ವಿಚಾರಣೆ ಕೂಡ ನಡೆಸಿದೆ.