ನ್ಯೂಸ್ ನಾಟೌಟ್: ಮನೆಯಲ್ಲಿ ಯಾರಿಗೂ ಹೇಳದೆ ಹೊರ ಹೋದಳು ಎಂಬ ಕಾರಣಕ್ಕೆ ಆಕ್ರೋಶಗೊಂಡ ತಂದೆ ತನ್ನ ಮಗಳನ್ನು ಕೊಂದು ಪೈಶಾಚಿಕ ಕೃತ್ಯ ಎಸಗಿರುವ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.
20 ವರ್ಷದ ಮಗಳನ್ನು ಹತ್ಯೆ ಮಾಡಿದ್ದಾನೆ. ಮೃತದೇಹವನ್ನು ತನ್ನ ಬೈಕ್ ಗೆ ಕಟ್ಟಿ ಗ್ರಾಮದೆಲ್ಲೆಡೆ ಎಳೆದೊಯ್ದಿದ್ದಾನೆ. ಕೊನೆಗೆ ರೈಲ್ವೆ ಹಳಿಯತ್ತ ಎಸೆದಿದ್ದಾನೆ. ಮುಚ್ಚಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ಬುಧವಾರ ಮನೆಯಿಂದ ಹೊರಹೋಗಿದ್ದು, ಗುರುವಾರ ಹಿಂದಿರುಗಿದ್ದಾಳೆ. ಇದರಿಂದ ಕುಪಿತನಾದ ತಂದೆ ಬಾವ್, ಹರಿತ ಆಯುಧದಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ. ಮೃತದೇಹವನ್ನು ಆತ ಬೈಕ್ ಗೆ ಕಟ್ಟಿ ಎಳೆದೊಯ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಡಿಎಸ್ ಪಿ ಕುಲದೀಪ್ ಸಿಂಗ್ ಹೇಳಿದ್ದಾರೆ.