ನ್ಯೂಸ್ ನಾಟೌಟ್: ಸಂಗೀತ ವರ್ಷಧಾರೆ ಮಳೆ ಹಾಡುಗಳ ಕಲರವ ಕಾರ್ಯಕ್ರಮವನ್ನು ಸುವಿಚಾರ ಸಾಹಿತ್ಯ ಸಂಘ, ವಿದ್ಯಾ ಬೋಧಿನೀ ಪ್ರೌಢಶಾಲೆ ಬಾಳಿಲ ಇದರ ಆಶ್ರಯದಲ್ಲಿ ಬುಧವಾರ ನಡೆಸಲಾಯಿತು. ವಿದ್ಯಾ ಬೋಧಿನೀ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣರ ರಾವ್ ಯು ನಡೆಸಿ ಮಳೆ ಹಾಡುಗಳ ಕಲರವ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮ ಮನಸ್ಸಿಗೆ ಮುದ ನೀಡಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಳೆ ತಜ್ಞ ಹಾಗೂ ವಿಶ್ಲೇಷಕ ಶ್ರೀ ಪಿ ಜಿಎಸ್ ಎನ್ ಪ್ರಸಾದ್ ಅವರ ಸಾಧನೆಯನ್ನು ಗುರುತಿಸಿ ಕ ಸಾ ಪ ಸುಳ್ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ವರ್ಷಧಾರೆ ಮಳೆ ಕಲರವ ಕಾರ್ಯಕ್ರಮವನ್ನು ಭಾವನಾ ಸುಗಮ ಸಂಗೀತ ಬಳಗದ ಕೆ ಆರ್ ಗೋಪಾಲಕೃಷ್ಣ ಹಾಗೂ ಉಪನ್ಯಾಸಕಿ ಶ್ರೀಮತಿ ಸತ್ಯವತಿ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ ಸಾ ಪ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಕಸಾಪ ಕೋಶಾಧಿಕಾರಿ ದಯಾನಂದ ಆಳ್ವಾ ಉಪಸ್ಥಿತರಿದ್ದು, ಮುಖ್ಯಶಿಕ್ಷಕ ಶ್ರೀ ಯಶೋಧರ ನಾರಾಲು ಸ್ವಾಗತಿಸಿ ಶ್ರೀ ಅರವಿಂದ ಬಾಳಿಲ ಎಲ್ಲರನ್ನೂ ವಂದಿಸಿದರು. ಶ್ರೀ ದಿನೇಶ್ ಇವರು ಕಾರ್ಯಕ್ರಮ ನಿರೂಪಿದರು.