ನ್ಯೂಸ್ ನಾಟೌಟ್: ತೆಲುಗು ಕಿರುತೆರೆಯ ಜನಪ್ರಿಯ ನಿರೂಪಕಿ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವವನ್ನು ಹೇಳಿಕೊಂಡಿದ್ದು, ಎಲ್ಲರನ್ನೂ ಅಚ್ಚರಿ ಪಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ನಿರೂಪಕಿ ವೆಬ್ಸಿರೀಸ್ ನಿರ್ದೇಶಕನ ವಿರುದ್ಧ ಈ ಅರೋಪ ಮಾಡಿದ್ದಾರೆ.
ಕಿರುತೆರೆಯೊಂದಿಗೆ ಸೋಶಿಯಲ್ ಮೀಡಿಯಾದಲ್ಲೂ ಬಹಳ ಜನಪ್ರಿಯರಾಗಿರುವ ವರ್ಷಿಣಿ ಸೌಂದರ್ರಾಜನ್ ಈಗ ಕಾಸ್ಟಿಂಗ್ ಕೌಚ್ ಈ ಆರೋಪ ಮಾಡಿದ್ದು, ವೆಬ್ ಸಿರೀಸ್ ನಿರ್ದೇಶಕನ ವಿರುದ್ಧ ನಿರೂಪಕಿ ವರ್ಷಿಣಿ ಸೌಂದರ್ರಾಜನ್ ಸ್ಪೋಟಕ ಆರೋಪ ಮಾಡಿದ್ದಾರೆ. ತಾನೂ ಕೂಡ ಕಾಸ್ಟಿಂಗ್ ಕೌಚ್ಗೆ ಬಲಿಯಾಗುವ ಹಾದಿಯಲ್ಲಿದ್ದೆ ಎಂದು ಹೇಳಿದ್ದಾರೆ. ವರ್ಷಿಣಿ ಸೌಂದರ್ ರಾಜನ್ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದು, ತೆಲುಗಿನಲ್ಲಿ ಸಾಕಷ್ಟು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿದ್ದಾರೆ. ಧೀ ಶೋ ಎಂಬ ತೆಲುಗಿನ ಕಾರ್ಯಕ್ರಮದ ಮೂಲಕ ವರ್ಷಿಣಿ ಸಾಕಷ್ಟು ಗಮನಸೆಳೆದಿದ್ದರು.
ಧೀ ಕಾರ್ಯಕ್ರಮದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದ ವರ್ಷಿಣಿಸೌಂದರ್ ರಾಜನ್, ಟಿವಿಯ ಅತ್ಯಂತ ಹಾಟ್ ನಿರೂಪಕಿಯರ ಪೈಕಿ ಎಂಬ ಮಾತಿತ್ತು. ಅದರಲ್ಲೂ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಸಂಪಾದಿಸಿದ್ದಾರೆ.
ಆದರೆ, ವರ್ಷಣಿ ಸೌಂದರ್ ರಾಜನ್ ಅವರ ಬ್ಯೂಟಿಗೆ ಮನಸೋತವರು ಸೋಶಿಯಲ್ ಮೀಡಿಯಾದ ಅಭಿಮಾನಿಗಳು ಮಾತ್ರವಲ್ಲ. ಸಿನಿಮಾರಂಗದವರೂ ಕೂಡ ಇದ್ದಾರೆ.ಕೆಲ ವರ್ಷಗಳ ಹಿಂದೆ ತಮಗೆ ಆಗಿರುವ ಅನುಭವವನ್ನು ಇವರು ಹೇಳಿಕೊಂಡಿದ್ದಾರೆ. ವೆಬ್ಸಿರೀಸ್ನಲ್ಲಿ ಅವಕಾಶ ಪಡೆಯುವ ನಿಟ್ಟಿನಲ್ಲಿ ನಾನು ತೀವ್ರವಾಗಿ ಪ್ರಯತ್ನ ಪಟ್ಟಿದ್ದೆ. ಕೆಲವೊಂದು ಆಡಿಷನ್ಗಳನ್ನೂ ನೀಡಿದ್ದೆ ಎಂದಿದ್ದಾರೆ.ಇದೇ ರೀತಿ ನೀಡಿದ ಆಡಿಷನ್ ವೇಳೆ ತಮಗಾದ ಕಾಸ್ಟಿಂಗ್ ಕೌಚ್ನ ಅನುಭವನ್ನು ಅವರು ತಿಳಿಸಿದ್ದು, ಅವರು ಹೇಳಿರುವ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕೆ, ತಾನೂ ಕೂಡ ಕಾಸ್ಟಿಂಗ್ ಕೌಚ್ನ ಬಲಿಪಶು ಎಂದಿದ್ದಾರೆ. ಲಾಕ್ಡೌನ್ಗಿಂತ ಮುಂಚೆ ನನಗೆ ವೆಬ್ಸಿರೀಸ್ನಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತ್ತು. ಅದರ ನಿರ್ದೇಶಕ ಆಡಿಷನ್ಗಾಗಿ ಹೋಟೆಲ್ಗೆ ಬರುವಂತೆ ತಿಳಿಸಿದ್ದರು ಎಂದಿದ್ದಾರೆ.
ನಾನು ಹೋಟೆಲ್ಗೆ ಹೋಗಿದ್ದೆ. ಈ ವೇಳೆ ‘ನೀನು ನೋಡಲು ಬಹಳ ಸುಂದರವಾಗಿದ್ದೀಯ. ವೆಬ್ಸಿರೀಸ್ಗೆ ತುಂಬಾ ಚೆನ್ನಾಗಿ ಸೂಟ್ ಆಗಿತ್ತೀರಿ. ನಿಮ್ಮನ್ನು ನೋಡಿದ ಕ್ಷಣವೇ ನೀವು ಇದರಲ್ಲಿ ನಟಿಸಬಹುದು ಎಂದು ನಾನು ಅಂದುಕೊಂಡಿದ್ದೆ’ ಎಂದು ಹೇಳಿದ್ದ. ಆ ಬಳಿಕ ಹೋಟೆಲ್ನಲ್ಲಿ ಆತ ಇದ್ದ ರೂಮ್ಗೆ ಬರುವಂತೆ ತಿಳಿಸಿದ್ದ. ನಾನು ಅಲ್ಲಿಗೆ ಹೋಗಿದ್ದೆ. ಈ ವೇಳೆ ಆತ ನನ್ನ ಕೈಗಳನ್ನು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸಿದ ಎಂದು ವರ್ಷಿಣಿ ಸೌಂದರ್ರಾಜನ್ ಹೇಳಿದ್ದಾರೆ.
ಕೈಗಳನ್ನು ಹಿಡಿದುಕೊಂಡ ಆತ ನನ್ನನ್ನು ಬೆಡ್ ಮೇಲೆ ದೂಡಿದ್ದ. ಅದರ ಬೆನ್ನಲ್ಲಿಯೇ ನಿನ್ನ ಮೈಮೇಲಿರುವ ಬಟ್ಟೆಗಳನ್ನು ತೆಗೆದುಹಾಕು ಎಂದು ಹೇಳಿದ್ದ ಎಂದು ವರ್ಷಿಣಿ ಸ್ಫೋಟಕ ಕಾಮೆಂಟ್ ಮಾಡಿದ್ದಾರೆ.
ನಾನು ಭಯಭೀತಳಾಗಿ ಹೋಗಿದ್ದೆ. ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದೆ. ಆ ಬಳಿಕ ಇದೇ ವಿಚಾರವನ್ನು ನೆನೆಸಿಕೊಂಡು ಬಹಳ ಕಾಲ ಅತ್ತಿದ್ದೆ ಎಂದು ವರ್ಷಿಣಿ ಮಾತನಾಡಿದ್ದಾರೆ. ಆ ನಿರ್ದೇಶಕ ಯಾರು? ಆ ವೆಬ್ ಸಿರೀಸ್ ಯಾವುದು ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.