ಗಂಡನೇ ಈಕೆಯನ್ನು ಪೊಲೀಸ್ ಗೆ ಹಿಡಿದುಕೊಟ್ಟದೇಕೆ?
ನ್ಯೂಸ್ ನಾಟೌಟ್ : ಸರ್ಕಾರ ಅದೆಷ್ಟೇ ನಿಯಮಗಳನ್ನು ಮಾಡಿದರೂ, ನಿಯಮಗಳಲ್ಲಿನ ಲೋಪದೋಷ ಕಂಡುಹಿಡಿದು ಅದ ಲಾಭ ಪಡೆಯೋದು ಜನರು ಹಣದ ಆಸೆಯಿಂದ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಅದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಎಂಬಂತೆ ಘಟನೆಯೊಂದು ಬೆಳಕಿಗೆ ಬಂದಿದೆ. ಆದರೆ, ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಸರ್ಕಾರ ನೀಡುವ ಪಿಂಚಣಿ ಸಲುವಾಗಿ ಮಾಡಿದ ಮೋಸದಿಂದ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮೃತ ತಂದೆಯ ಪಿಂಚಣಿಗಾಗಿ ತಾನೆ ಪತ್ನಿ ಎಂದು ಹೇಳಿಕೊಂಡು ಕಳೆದ 10 ವರ್ಷದಿಂದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದರು. ಕಳೆದ 10 ವರ್ಷಗಳಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷ ರೂಪಾಯಿ ಪಿಂಚಣಿ ಹಣ ಪಡೆದಿದ್ದ ಮೊಹ್ಸಿನಾ ಪರ್ವೇಜ್ ಎಂಬ ಮಹಿಳೆಯನ್ನು ಆಕೆಯ ಗಂಡ ನೀಡಿದ ದೂರಿನ ಆಧಾರದಲ್ಲಿ ಬಂಧಿಸಲಾಗಿದೆ.
ಇಲ್ಲಿ ವಿಶೇಷವೆಂದರೆ ಪೊಲೀಸರಿಗೆ ಇದರ ಕುರಿತಾದ ಮಾಹಿತಿ ನೀಡಿದ್ದು ಆಕೆಯ ನಿಜ ಪತಿ. ಇತ್ತೀಚೆಗೆ ದಂಪತಿಗಳಿಬ್ಬರು ಯಾವುದೋ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಪತಿಗೆ ಪತ್ನಿಯ ಮಹಾವಂಚನೆ ಗೊತ್ತಾಗಿದೆ. ತಕ್ಷಣವೇ ಅವರು ಈ ಕುರಿತಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಲಿಗಂಜ್ ನಿವಾಸಿಯಾಗಿದ್ದ ಈಕೆಯ ತಂದೆ ವಿಜರತ್ ಉಲ್ಲಾ ಖಾನ್ 1987ರ ನವೆಂಬರ್ 30 ರಂದು ಸರ್ಕಾರಿ ಸರ್ವೇಯರ್ ಹುದ್ದೆಯಿಂದ ನಿವೃತ್ತರಾಗಿದ್ದರು. 2013ರ ಜನವರಿ 2ರವರೆಗೂ ಅವರು ಸರ್ಕಾರದಿಂದ ನಿವೃತ್ತಿ ವೇತನ ಪಡೆದುಕೊಳ್ಳುತ್ತಿದ್ದರು. ಇವರ ಪತ್ನಿ ಸವಿಯಾ ಬೇಗಂ ಅಂದರೆ ವಂಚಕಿಯ ತಾಯಿ ಆಕೆಯ ತಂದೆಗೂ ಮೊದಲೇ ನಿಧರರಾಗಿದ್ದರು.
ತನ್ನ ತಂದೆ ವಿಜರತ್ ಉಲ್ಲಾ ಖಾನ್ ಮರಣದ ನಂತರ, ಮಗಳು ಮೊಹ್ಸಿನಾ ಪರ್ವೇಜ್ ತನ್ನ ತಂದೆಯ ಹೆಂಡತಿ ನಾನೆ ಎಂದು ತೋರಿಸಲು ನಕಲಿ ದಾಖಲೆಗಳನ್ನು ನಿರ್ಮಿಸಿ ಪಿಂಚಣಿ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರು. ಮೊಹ್ಸಿನಾ, ಕಳೆದ 10 ವರ್ಷದ ಅವಧಿಯಲ್ಲಿ ಸರ್ಕಾರದಿಂದ ೧೨ ಲಕ್ಷ ರೂಪಾಯಿ ಪಿಂಚಣಿ ಹಣ ಪಡೆದುಕೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಈ ವಂಚನೆಯ ಬಗ್ಗೆ ಪತಿಗೆ ಈ ಮೊದಲೇ ಗೊತ್ತಿತ್ತು. ಹಾಗಿದ್ದರೂ ದಂಪತಿಗಳು ಜಗಳವಾಡಿದ ನಂತರ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.