ನ್ಯೂಸ್ ನಾಟೌಟ್ : ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಬೆಂಬಲಿತರಿಗೆ ಬಹುಮತ ಇರುವ ಗ್ರಾಮ ಪಂಚಾಯತ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮತಿ ಶಕ್ತಿವೇಲು ಹಾಗೂ ವಿಮಲಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಒಬ್ಬರಾದ ವಿಮಲ ಪ್ರಸಾದ್ ನಾಮಪತ್ರ ಹಿಂಪಡೆದಿದ್ದು ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮುಂದಿನ ಎರಡೂವರೆ ವರ್ಷಗಳ ಕಾಲ ಎರಡನೇ ಅವಧಿಯ ಅಧ್ಯಕ್ಷರಾಗಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಕಣದಲ್ಲಿದ್ದು ಚುನಾವಣೆ ನಡೆಯಲಿದೆ.ಇದರ ಫಲಿತಾಂಶವು ಕೂಡ ಸದ್ಯದಲ್ಲಿ ಹೊರಬೀಳಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಕೆ.ಅಬೂಸಾಲಿ ಹಾಗೂ ಎಸ್.ಕೆ.ಹನೀಫ ಅವರು ನಾಮಪತ್ರ ಸಲ್ಲಿಸಿದ್ದು ಚುನಾವಣೆ ನಡೆಯಲಿದೆ.ಒಟ್ಟಿನಲ್ಲಿ ಸಂಪಾಜೆ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷತೆ ಆಯ್ಕೆ ಭಾರಿ ಕುತೂಹಲ ಮೂಡಿಸುವಂತೆ ಮಾಡಿತ್ತು.ಇದೀಗ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಮೇಲೆ ಉಪಾಧ್ಯಕ್ಷ ಸ್ಥಾನಕ್ಕೆ ಯಾರ ಹೆಸರು ಕೇಳಿ ಬರಲಿದೆ ಅನ್ನುವ ಕುತೂಹಲ ಜಾಸ್ತಿಯಾಗಿದೆ.
ಅಧ್ಯಕ್ಷರಾಗಿ ಸುಮತಿ ಶಕ್ತಿವೇಲು ಅವಿರೋಧವಾಗಿ ಆಯ್ಕೆ