ನ್ಯೂಸ್ ನಾಟೌಟ್ : ಒಮ್ಮೆ ಯೂಟ್ಯೂಬ್ಗೆ ಹೋಗಿ ‘ಹರ ಹರ ಶಂಭು’ ಎಂಬ ಹಾಡನ್ನು ಹುಡುಕಿದ್ರೆ ಸಾಕು,ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡ ವಿಡಿಯೋಗಳು ಕಾಣಸಿಗುತ್ತವೆ.ಇಂತಹ ಹಾಡನ್ನು ಹಾಡಿರುವ ಮುಸ್ಲಿಂ ಗಾಯಕಿಯ ಸಹೋದರನ ಬರ್ಬರ ಹತ್ಯೆಯಾಗಿದೆ.ಈಕೆ ‘ಹರ ಹರ ಶಂಭು’ ಎಂಬ ಹಾಡನ್ನು ಹಾಡುವ ಮೂಲಕ ಜನಪ್ರಿಯರಾಗಿದ್ದರು.
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಭಜನೆ ಹಾಡುವ ವಿವಾದದಲ್ಲಿ ಸಿಲುಕಿದ್ದ ಮುಸ್ಲಿಂ ಗಾಯಕಿಯ ಅಪ್ರಾಪ್ತ ಸಹೋದರನನ್ನು ಹತ್ಯೆ ಮಾಡಲಾಗಿದ್ದು,ಈ ಪ್ರಕರಣ ಬೆಚ್ಚಿ ಬೀಳಿಸುವಂತೆ ಮಾಡಿದೆ. ಸುಶ್ರಾವ್ಯ ಕಂಠದ ಮೂಲಕ ಹಾಡುವ ಮುಸ್ಲಿಂ ಗಾಯಕಿ ಫರ್ಮಾನಿ ನಾಜ್ ಅವರ ಸ್ವರ ಮಾಂತ್ರಿಕತೆಗೆ ಮನಸೋಲದವರೇ ಇಲ್ಲ.ಅವರ ಹಾಡನ್ನು ಒಮ್ಮೆ ಕೇಳಿದ್ರೆ ತಲೀನರಾಗೋದಂತು ಗ್ಯಾರಂಟಿ.ಇದೀಗ ಅವರ ಸಹೋದರನನ್ನು ಕೊಲೆ ಮಾಡಲಾಗಿದ್ದು,ಹಲವು ಅನುಮಾನಗಳಿಗೆ ಎಡೆ ಮಾಡಕೊಟ್ಟಿದೆ.
ಮಸ್ಲಿಂ ಗಾಯಕಿ ಭಜನೆ ಹಾಡುವ ಮೂಲಕ ಭಾರಿ ಪ್ರಸಿದ್ಧಿಯನ್ನು ಪಡೆದವರು.ಅವರ ಹಾಡುಗಳು ಹೆಚ್ಚು ವೈರಲ್ ಆಗುತ್ತಿದ್ದು ಭಾರಿ ಅಭಿಮಾನಿಗಳ ಸಂಖ್ಯೆಯನ್ನೇ ಹೊಂದಿದ್ದಾರೆ.ಭಜನೆ ಹಾಡುವ ವಿಚಾರವಾಗಿ ನಡೆದ ಜಗಳದಲ್ಲಿ ಮುಸ್ಲಿಂ ಗಾಯಕಿ ಫರ್ಮಾನಿ ನಾಜ್ 17 ವರ್ಷದ ಸಹೋದರನನ್ನು ಅಪರಿಚಿತ ದುಷ್ಕರ್ಮಿಗಳು ಇರಿದು ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕೊಲೆಘಾತುಕರು ಯಾರು ಎನ್ನುವ ಹುಡುಕಾಟದಲ್ಲಿ ಪೊಲೀಸರು ಇದ್ದು, ತೀವ್ರ ಶೋಧ ಮುಂದುವರಿಸಿದ್ದಾರೆ.
ಸಂತ್ರಸ್ತ ಖುರ್ಷಿದ್ ಗಾಯಕಿ ಫರ್ಮಾನಿ ನಾಜ್ ಅವರ ಸೋದರ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ. ರತನ್ಪುರಿಯ ಮುಹಮ್ಮದ್ಪುರ ಮಾಫಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು. ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಕಳೆದ ವರ್ಷ ನಾಜ್ ಹಾಡಿರುವ ಭಗವಾನ್ ಶಿವನನ್ನು ಸ್ತುತಿಸುವ ಭಕ್ತಿಗೀತೆ ‘ಹರ್ ಹರ್ ಶಂಭು’ ಅನ್ನು ದೇವಬಂದ್ನ ಧರ್ಮಗುರುಗಳು “ಅನ್-ಇಸ್ಲಾಮಿಕ್” ಮತ್ತು “ಹರಾಮ್” (ನಿಷೇಧಿತ) ಎಂದು ಕರೆಯುತ್ತಾರೆ.
ಮುಜಾಫರ್ನಗರದಿಂದ ಬಂದಿರುವ ನಾಜ್, ಕಲಾವಿದರಿಗೆ ಯಾವುದೇ ಧರ್ಮವಿಲ್ಲ ಮತ್ತು ಯಾವುದೇ ತಪ್ಪು ಮಾಡಿಲ್ಲ ಎಂದು ತನ್ನನ್ನು ತಾನು ಸಮರ್ಥಿಸಿಕೊಂಡರು. ಅವರು ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್ನ ಸೀಸನ್ 12 ನಲ್ಲಿ ಸಹ ಭಾಗವಹಿಸಿದರು. ನಾಜ್ ಅವರು ಯೂಟ್ಯೂಬ್ ಚಾನೆಲ್ನಲ್ಲಿ 4.5 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದಾರೆ.ಗಾಯಕಿ ಹಾಡಿದ ಹರ ಹರ ಶಂಭು ಹಾಡು ಇಲ್ಲಿದೆ ನೋಡಿ