ನ್ಯೂಸ್ ನಾಟೌಟ್ : ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾದ ಸುದ್ದಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದು ಅಲ್ಲದೇ ,ನಾಡಿನ ಜನತೆ ಇವರ ನಿಧನದ ಸುದ್ದಿ ಕೇಳಿ ಕಂಬನಿ ಸುರಿಸಿದ್ದಾರೆ. ಅತಿ ಸಣ್ಣ ವಯಸ್ಸಿನಲ್ಲಿಯೇ ( 37 ವರ್ಷ) ಅವರು ಮುದ್ದು ಮಗನನ್ನ ಮತ್ತು ಪತಿಯನ್ನು, ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದು ನೋವನ್ನುಂಟು ಮಾಡಿದೆ.
ಇದರ ಮಧ್ಯೆ ಸ್ಪಂದನಾ ಅವರ ಕನಸುಗಳ ಬಗ್ಗೆ ನಿರ್ದೇಶಕರೊಬ್ಬರು ಹೇಳಿಕೊಂಡಿದ್ದಾರೆ. ಎಲ್ಲರಂತೆಯೇ ಸ್ಪಂದನಾ ತನ್ನ ಮಗನ ಮೇಲೆ ಸಾವಿರಾರು ಕನಸನ್ನು ಹೊತ್ತುಕೊಂಡಿದ್ದರು. ಪತಿಯಂತೆಯೇ ಆತನನ್ನು ಹೀರೋ ಮಾಡಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದು ಅದಕ್ಕಾಗಿ ರೆಡಿ ಮಾಡುತ್ತಿದ್ದರು ಎನ್ನುವ ಸುದ್ದಿ ಇದೀಗ ತಿಳಿದು ಬಂದಿದೆ.ಆದರೆ ಮನಸ್ಸಲ್ಲಿ ಅನೇಕ ಕನಸುಗಳನ್ನು ಹುದುಗಿಟ್ಟು ಸ್ಪಂದನಾ ಅವರು ಅಸುನೀಗಿದ್ದು ಇನ್ನಿಲ್ಲದ ನೋವನ್ನು ತರುವಂತೆ ಮಾಡಿದೆ.
ಸ್ಪಂದನಾ ಅವರಿಗೆ ಮಗನೆಂದರೆ ಪಂಚ ಪ್ರಾಣ.ಪತಿಯನ್ನು ಹೇಗೆ ಪ್ರೀತಿಸುತ್ತಿದ್ದರೋ ಹಾಗೆಯೇ ಮಗನ ಮೇಲೂ ಭಾರಿ ಮಮತೆಯಿತ್ತು.ಪತಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಕ್ಕೆ ಹೆಮ್ಮೆ ಪಟ್ಟುಕೊಂಡಿದ್ದ ಸ್ಪಂದನಾ ತನ್ನ ಮಗನೂ ಕೂಡ ಅವರ ದಾರಿಯನ್ನೇ ಹಿಡಿಬೇಕು.ಅವರಂತೆಯೇ ನಾನು ಹಿರೋ ಆಗಿ ನೋಡಲು ಇಚ್ಚಿಸುತ್ತೇನೆ ಎನ್ನುವ ನೂರಾರು ಕನಸುಗಳಿದ್ದವು. ಈ ಕುರಿತು ಮಾತನಾಡಿರುವ ನಿರ್ದೇಶಕ ಮಹೇಶ್ ಅವರು ” ಸ್ಪಂದನಾಗೆ ತಮ್ಮ ಮಗನನ್ನ ಹೀರೋ ಮಾಡಬೇಕು ಅನ್ನೋ ಕನಸಿತ್ತು. ಮಗನ ಮೊದಲ ಸಿನಿಮಾವನ್ನ ವಿಜಯ ರಾಘವೇಂದ್ರ ಡೈರೆಕ್ಷನ್ ಮಾಡುವ ಪ್ಲಾನಿತ್ತು. ತನ್ನ ಮಗನಂತೆಯೇ ಶ್ರೀಮುರಳಿ, ಪ್ರಶಾಂತ್ ನೀಲ್ ಮಕ್ಕಳನ್ನು ಕೂಡ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ಇತ್ತ ನಟ ವಿಜಯರಾಘವೇಂದ್ರ ತಂದೆ ಚಿನ್ನೆಗೌಡ್ರು ಸೋದರ ಸಂಬಂಧಿ ಗ್ರೀನ್ ಹೌಸ್ ವಾಸು ಕೂಡ ಈ ವಿಚಾರವಾಗಿ ಮಾತನಾಡಿದ್ದು,ಸ್ಪಂದನಾ ವಿಜಯ್ ರದ್ದು ಅಪರೂಪದ ದಾಂಪತ್ಯ.ಇದು ಏಳೇಳು ಜನ್ಮದ ಬಂಧ. ಇಬ್ಬರು ಪ್ರೀತಿಸಿ ಮದುವೆಯಾಗಿದ್ರು. ಅವರ ಮಗ ಶೌರ್ಯನ ಬಗ್ಗೆ ಸ್ಪಂದನಾ ಬಹಳ ಕನಸನ್ನ ಕಂಡಿದ್ರು. ಮಗನನ್ನ ಸಿನಿಮಾ ರಂಗಕ್ಕೆ ತರಲಿಕ್ಕೆ ಪ್ರಯತ್ನ ನಡಿತಿತ್ತು. ಅಷ್ಟರಲ್ಲಾಗಲೇ ಈ ರೀತಿ ಆಗಿರೋದು ನಿಜಕ್ಕೂ ಖೇಧಕರ.
ನಾಗಾಭರಣರ ಬಳಿ ಶೌರ್ಯ ತರಬೇತಿಯನ್ನ ಪಡಿಯುತ್ತಿದ್ದ.ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿಯಾಗಲು ಈತ ಭಾರಿ ತಯಾರಿ ನಡೆಸುತ್ತಿದ್ದ. ಭಾನುವಾರ ಬ್ಯಾಂಕಾಕ್ ಹೋಗುವ ಮುನ್ನಾ ಸ್ಪಂದನಾರೇ ಮಗನನ್ನ ಕ್ಲಾಸ್ ನಿಂದ ಕರೆದುಕೊಂಡು ಬಂದಿದ್ದರು. ಮಗನನ್ನ ಚಿನ್ನೇಗೌಡರ ಮನೆಯಲ್ಲಿ ಬಿಟ್ಟು ಅವರ ತಾಯಿಯನ್ನು ಮಾತಾಡಿಸಿಕೊಂಡು ಹೋಗಿದ್ದರು.ಇದನ್ನೆಲ್ಲಾ ನೆನೆಸಿಕೊಂಡಾಗ ದುಖಃವಾಗುತ್ತೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಸದ್ಯ ಬ್ಯಾಂಕಾಕ್ನಲ್ಲಿ ಸ್ಪಂದನಾ ಅವರ ಪೋಸ್ಟ್ ಮಾರ್ಟ ಕೆಲಸ ಮುಗಿದಿದೆ. ಅಲ್ಲಿಂದ ಮೃತದೇಹ ತರೋದಕ್ಕೆ ಅಲ್ಲಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಸಂಜೆ ಥಾಯ್ ವಿಮಾನದ ಮೂಲಕ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸ್ಪಂದನಾ ಮೃತದೇಹ ಬರಲಿದೆ. ಇಂದಿನಿಂದ ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಹರಿಶ್ಚಂದ್ರ ಫಾಟ್ನಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿಕ್ಕಿದೆ.