ನ್ಯೂಸ್ ನಾಟೌಟ್ : ಜಿಲ್ಲಾಸ್ಪತ್ರೆಯ ಐಪಿಪಿ ವಾರ್ಡ್ನಲ್ಲಿದ್ದ ಹಸುಗೂಸು ಹಾಗೂ ಬಾಣಂತಿ ಮೇಲೆ ಚಾವಣಿ (Roof collapse ) ಕುಸಿದಿದೆ. ಮೂರು ದಿನದ ಹಿಂದಷ್ಟೇ ಹೆರಿಗೆ ಆಗಿ ಐಪಿಪಿ ವಾರ್ಡ್ಗೆ ಬಾಣಂತಿ ಹಾಗೂ ಶಿಶುವನ್ನು ಶಿಫ್ಟ್ ಮಾಡಲಾಗಿತ್ತು. ತಾಯಿ-ಶಿಶು ಬೆಚ್ಚಗೆ ಮಲಗಿದ್ದಾಗ ಏಕಾಏಕಿ ಚಾವಣಿಯ ಪದರ ಕುಸಿದಿದೆ. ಭಾನುವಾರ (ಆ.6) ರಾತ್ರಿ 11:30 ರ ಸುಮಾರಿಗೆ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಸ್ಥಳಕ್ಕೆ ಎಮರ್ಜನ್ಸಿ ಟೀಮ್ ಭೇಟಿ ನೀಡಿದ್ದು, ಸರಿಯಾದ ವ್ಯವಸ್ಥೆ ಮಾಡಲು ಡಿಸ್ಟಿಕ್ ಸರ್ಜನ್ ದೇವರಾಜ್ಗೆ ತರಾಟೆ ತೆಗೆದುಕೊಂಡಿದೆ. ಸದ್ಯ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಕುಸಿದ ಜಾಗದಲ್ಲಿದ್ದ ಹಾಸಿಗೆಗಳನ್ನು ತೆಗೆಯಲಾಗಿದೆ.
ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದ ಪ್ರದೀಪ್ ಹಾಗೂ ಅಮೃತಾ ದಂಪತಿ ಶಿಶು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬಾಣಂತಿ ಹಾಗೂ ಶಿಶು ಮಲಗಿದ್ದ ಹಾಸಿಗೆಯ ಬದಿಯಲ್ಲಿ ಚಾವಣಿ ಕುಸಿದಿದೆ. ಇದರಿಂದಾಗಿ ಸ್ವಲ್ಪದರಲ್ಲಿಯೇ ಭಾರೀ ಅನಾಹುತ ತಪ್ಪಿದೆ.
ಜಿಲ್ಲಾಸ್ಪತ್ರೆ ಬಡವರ ಆಸ್ಪತ್ರೆ ದಯವಿಟ್ಟು ಸರಿಯಾದ ವ್ಯವಸ್ಥೆ ಮಾಡಿ ಎಂದು ಕುಟುಂಬಸ್ಥರು ವೈದ್ಯಾಧಿಕಾರಿಗೆ ಮನವಿ ಮಾಡಿದ್ದಾರೆ.