ನ್ಯೂಸ್ ನಾಟೌಟ್: ಕಳೆದ ವಿಧಾನ ಸಭಾ ಚುನಾವಣೆಯ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಅಕ್ಕ ಸ್ಪಂದನ ಹೃದಯಾಘಾತದಿಂದ ನಿಧನರಾಗಿದ್ದಾರೆ.ಪತಿ ವಿಜಯ್ ಅವರ ಜೊತೆಗೆ ಬ್ಯಾಂಕಾಕ್ ಗೆ ತೆರಳಿದ್ದಾಗ ಅಲ್ಲಿ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ದಂಪತಿಗೆ ಇವರಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ.
ಅಪ್ಪು ನಿಧನದ ಶಾಕ್ನಿಂದ ಹೊರ ಬಂದಾಗಲೇ ಮತ್ತೊಂದು ಆಘಾತಕಾರಿ ವಿಚಾರ ಕುಟುಂಬಕ್ಕೆ ಶಾಕ್ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ.ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ದಕ್ಷ ಎಸಿಪಿಯಾಗಿದ್ದ ಬಿಕೆ ಶಿವರಾಮ್ ಅವರ ಮಗಳು.
ಸ್ಪಂದನಾ ಅವರು ಮೂಲತಃ ಮಂಗಳೂರಿನ ಬೆಳ್ತಂಗಡಿಯವರು.ಮದುವೆ ಬಳಿಕ ಪತಿ ಜೊತೆಗೆ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದರು.2004ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಕಾಫಿ ಡೇಯಲ್ಲಿ ವಿಜಯ್ ಹಾಗೂ ಸ್ಪಂದನಾ ಅವರ ಮೊದಲ ಭೇಟಿಯಾಗಿತ್ತು.ಆ ನಂತರ 2007ರಲ್ಲಿ ಇವರಿಬ್ಬರು ಮತ್ತೆ ಭೇಟಿಯಾದರು.ವಿಜಯ್ ಗೆ ಸ್ಪಂದನಾ ಮೇಲೆ ಪ್ರೀತಿ ಹುಟ್ಟಿತ್ತು.ಇಬ್ಬರ ನಡುವೆ ಸ್ನೇಹ ಬೆಳೆಯಿತು.
ಸ್ಪಂದನಾ , ವಿಜಯ್ ಪ್ರೀತಿ ವಿಷಯ ಮನೆಯವರಿಗೆ ಗೊತ್ತಾಗಿತ್ತು.ವಿಜಯ್ ತಂದೆ ಚಿನ್ನೇ ಗೌಡ್ರು ಸ್ಪಂದನಾಗೆ ನೇರವಾಗಿ ನನ್ನ ಮಗನನ್ನು ಮದುವೆಯಾಗ್ತೀಯಾ ಅಂತ ಕೇಳಿದ್ರಂತೆ ಇದಕ್ಕೆ ಸ್ಪಂದನಾ ಒಪ್ಪಿದ್ರಂತೆ.
ಎರಡೂ ಕುಟುಂಬಕ್ಕೆ ಮದುವೆ ವಿಚಾರ ಗೊತ್ತಾಗಿ ಒಂದು ತಿಂಗಳಾಗುತ್ತಿದ್ದಂತೆ ಮದುವೆ ಫಿಕ್ಸ್ ಕೂಡ ಆಯಿತು.ಇವರಿಬ್ಬರ ಮದುವೆಯಾಗಿ 16 ವರ್ಷಗಳು ಕಳೆದಿವೆ.2007ರಲ್ಲಿ ಆಗಸ್ಟ್ 26ರಂದು ಮದುವೆ ನಡೆದಿತ್ತು .
ಸ್ಪಂದನಾ ತುಂಬ ಸೈಲೆಂಟ್ ಸ್ವಭಾವದವರು,ಅದರ ಜತೆಗೆ ತುಂಬ ಸ್ಟ್ರಾಂಗ್ ಅಂತೆ.ಇನ್ನು ಸಸ್ಪ್ರೈಸ್ ಕೋಡೋದು ಅಂದ್ರೆ ಸ್ಪಂದನಾಗೆ ತುಂಬಾ ಇಷ್ಟವಂತೆ .
ಇನ್ನು ಸ್ಪಂದನಾ ಹಾಗೂ ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದರು.ಇನ್ಸ್ಟಾಗ್ರಾಮ್ ನಲ್ಲಿ ಆ್ಯಕ್ಟೀವ್ ಆಗಿದ್ದು, 60000ಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಮ್ ಅವರು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಸಹೋದರನಿಗೆ ಅಕ್ಕ ಸ್ಪಂದನಾ ಹಾಗೂ ಬಾವ ವಿಜಯ್ ರಾಘವೇಂದ್ರ ಬೆಂಬಲ ಸೂಚಿಸಿದ್ದರು.ಸ್ಪಂದನಾ ಅವರು ಬೆಳ್ತಂಗಡಿಯವರಾದ್ದರಿಂದ ವಿಜಯ್ ರಾಘವೇಂದ್ರ ಅವರು ನಿರರ್ಗಳವಾಗಿ ತುಳು ಮಾತನಾಡುತ್ತಿದ್ದರು. ಕೆಲವು ಕಾರ್ಯಕ್ರಮಗಳಲ್ಲಿ ಅವರು ತುಳುವಿನಲ್ಲೇ ಮಾತನಾಡಿದ್ದೂ ಇದೆ.
ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಚಿನ್ನಾರಿ ಮುತ್ತ ವಿಜಯ್ ಅವರು ಅದ್ಭುತ ಗಾಯಕರು ಕೂಡ.ವಿಜಯ್ ಅವರ ಗಾಯನಕ್ಕೆ ಪತ್ನಿ ಸ್ಪಂದನಾ ಮರುಳಾಗಿದ್ದರು.ಇವರ ಗಾಯನವನ್ನು ತುಂಬಾ ಇಷ್ಟ ಪಡುತ್ತಿದ್ದರಂತೆ.ಪತಿ ವಿಜಯ್ ಅವರು ಹಾಡುವ ಹಾಡುಗಳ ವಿಡಿಯೋ ತುಣುಕುಗಳನ್ನು ಪತ್ನಿ ಸ್ಪಂದನಾ ಅವರು ಆಗಾಗ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಿದ್ದರು.
ಹೀಗೆ ವಿದೇಶಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಥೈಲ್ಯಾಂಡ್ ನಲ್ಲಿ ಅವರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಪ್ರವಾಸದಲ್ಲಿದ್ದ ವೇಳೆ ಅವರಿಗೆ ಲೋ ಬಿಪಿ ಆಗಿ ಹೃದಯಾಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ .
2016ರಲ್ಲಿ ಸ್ಪಂದನಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ವಿ. ರವಿಚಂದ್ರನ್ ನಿರ್ದೇಶನದ ‘ಅಪೂರ್ವ’ ಸಿನಿಮಾದಲ್ಲಿ ಸ್ಪಂದನಾ ನಟಿಸಿದ್ದರು. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರ ಪತ್ನಿಯಾಗಿ ಅವರು ನಟಿಸಿದ್ದರು. ಈಗ ಸ್ಪಂದನಾ ಸಾವಿನ ಸುದ್ದಿಯನ್ನು ಅನೇಕರಿಂದ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ವಿಜಯ್ ಅವರಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ದೇವರಲ್ಲಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ನಾಳೆ ಬೆಂಗಳೂರಿಗೆ ವಿಜಯ್ ಪತ್ನಿ ಸ್ಪಂದನಾ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ ಎನ್ನಲಾಗಿದೆ.