ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆವರದಿಯಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ತೀವ್ರ ಗತಿಯಲ್ಲಿ ಏರುತ್ತಿದೆ. ಇದೀಗ 10 ಮತ್ತು 15 ವರ್ಷದ ಹುಡುಗರಿಬ್ಬರಿಗೆ ಮೂತ್ರ ಕುಡಿಸಿ ಗುದದ್ವಾರದಲ್ಲಿ ಹಸಿ ಮೆಣಸಿನಕಾಯಿ ತುರುಕಿದ್ದಾರೆ. ಅಷ್ಟೇ ಅಲ್ಲದೆ ಇಂಜೆಕ್ಷನ್ ಕೂಡ ಚುಚ್ಚಿ ಪೈಶಾಚಿಕತೆ ಮೆರೆದಿರುವ ವಿಡಿಯೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ.
ಮೂತ್ರ ತುಂಬಿದ ಬಾಟಲಿಯಲ್ಲಿ ಹಸಿ ಮೆಣಸಿನಕಾಯಿ ಅದ್ದಿ, ಮಕ್ಕಳಿಗೆ ಬಲವಂತಾಗಿ ತಿನ್ನಿಸಲಾಗಿದೆ. ಒಂದು ವೇಳೆ, ಮಕ್ಕಳು ತಿನ್ನಲು ಒಪ್ಪದಿದ್ದರೆ ಅವರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಣ ಕದ್ದಿದ್ದಾರೆಂದು ಆರೋಪದ ಮೇರೆ ಗೂಂಡಾಗಳು ಮಕ್ಕಳನ್ನು ಕಟ್ಟಿ, ಅವರನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಎಲ್ಲರ ಎದೆಯನ್ನು ನಡುಗಿಸಿದೆ.
ಇದೇ ರೀತಿಯ ಮತ್ತೊಂದು ವಿಡಿಯೋ ಕೂಡ ಇದೀಗ ವೈರಲ್ ಆಗುತ್ತಿದೆ. ಹುಡುಗರಿಬ್ಬರ ಕೈಗಳನ್ನು ಹಿಂದಕ್ಕೆ ಕಟ್ಟಿ ಅವರನ್ನು ನೆಲಕ್ಕೆ ಬೀಳಿಸಲಾಗಿದೆ. ಪ್ಯಾಂಟ್ ಬಿಚ್ಚಲಾಗಿದೆ ಮತ್ತು ಅವರ ಗುದದ್ವಾರದಲ್ಲಿ ಹಸಿರು ಮೆಣಸಿನಕಾಯಿಯನ್ನು ಉಜ್ಜುವುದು ಮತ್ತು ಅದರೊಳಗೆ ನುಗ್ಗಿಸುವುದನ್ನು ಕಾಣಬಹುದು. ಮಕ್ಕಳು ನೋವಿನಿಂದ ಚೀರಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಹಳದಿ ಬಣ್ಣದ ದ್ರವವನ್ನು ಇಂಜೆಕ್ಟ್ ಮಾಡುವುದನ್ನೂ ಕಾಣಬಹುದು.
ಈ ವಿಡಿಯೋವನ್ನು ಆಗಸ್ಟ್ 4ರಂದು ಶೂಟ್ ಮಾಡಲಾಗಿದೆ. ಸಿದ್ಧಾರ್ಥ ನಗರ ಜಿಲ್ಲೆಯ ಪಾಥ್ರಾ ಬಜಾರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಕೊಂಕಟಿ ಚೌಹುರಾ ಸಮೀಪದ ಅರ್ಶನ್ ಚಿಕನ್ ಶಾಪ್ನಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋಗಳ ವೈರಲ್ ಆಗುತ್ತಿದ್ದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಬ್ಬರು ಮಕ್ಕಳ ಆಕ್ಷೇಪಾರ್ಹ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುವುದರ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಈ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಗುರುತಿಸಲಾಗಿದ್ದು, ಈ ಪೈರಿ ಆರು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಅವರು ತಿಳಿಸಿದ್ದಾರೆ.