ನ್ಯೂಸ್ ನಾಟೌಟ್: 40 ಎಕರೆ ಸರ್ಕಾರಿ ಭೂಮಿಯನ್ನು ನುಂಗಿ ವ್ಯಕ್ತಿಯೊಬ್ಬರು ದರ್ಪ ಮೆರೆದಿದ್ದಾರೆ ಅನ್ನುವ ದೂರು ದಾಖಲಾಗಿದೆ.
ಕೊಣಾಲು ಗ್ರಾಮದ ಕೋಲ್ಪೆ, ಕಡಂಬಿಲ ಎಂಬಲ್ಲಿ ಘಟನೆ ನಡೆದಿದೆ. ಕಡಬ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಸರ್ಕಾರಿ ಭೂಮಿ ವಶಕ್ಕೆ ಪಡೆದುಕೊಂಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಕೇರಳದಿಂದ ಬಂದ ವ್ಯಕ್ತಿಯಿಂದ ಕಬ್ಜ..!
ಕೇರಳ ಮೂಲದ ಸೆಬಾಸ್ಟಿಯನ್ ಎಂಬ ವ್ಯಕ್ತಿಯಿಂದ ಸರ್ಕಾರಿ ಭೂಮಿ ಕಬಳಿಕೆಯಾಗಿದೆ. ಸರ್ಕಾರಿ ಭೂಮಿಯನ್ನ ಒತ್ತುವರಿ ಮಾಡಿ ಪಕ್ಕದಲ್ಲಿರುವ ಇಪ್ಪತ್ತಕ್ಕೂ ಅಧಿಕ ಕುಟುಂಬಕ್ಕೆ ಕಿರುಕುಳ ನೀಡಲಾಗಿದೆ ಅನ್ನುವಂತಹ ಆರೋಪಗಳು ಕೂಡ ಕೇಳಿ ಬಂದಿವೆ. ನೀವು ವಾಸಿಸುತ್ತಿರುವ ಮನೆ ನನ್ನದು, ಇಲ್ಲಿಂದ ಎದ್ದು ಹೋಗಿ ಎಂದು ಊರಿನವರಿಗೆಲ್ಲ ಸೆಬಾಸ್ಟಿಯನ್ ಬೆದರಿಕೆ ಹಾಕಿದ್ದಾರೆ ಅನ್ನುವ ದೂರುಗಳು ಕೇಳಿ ಬಂದಿವೆ.
ಸರ್ಕಾರಿ ಜಾಗದಲ್ಲಿ ಪ್ಲಾಸ್ಟಿಕ್ ಕಂಪೆನಿ
ಈಗಾಗ್ಲೇ ಸುಮಾರು 86 ಸೆಂಟ್ಸ್ ಸರ್ಕಾರಿ ಭೂಮಿಯನ್ನ ಸೆಬಾಸ್ಟಿಯನ್ ಕಬ್ಜ ಮಾಡಿದ್ದಾನೆ ಅನ್ನುವ ದೂರುಗಳು ಕೇಳಿ ಬಂದಿದೆ.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಜಾಗದಲ್ಲಿ ಪ್ಲಾಸ್ಟಿಕ್ ಕಂಪೆನಿ ನಿರ್ಮಾಣಕ್ಕೆ ಆತ ಮುಂದಾಗಿದ್ದಾನೆ ಎನ್ನಲಾಗಿದೆ. ಇದಲ್ಲದೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಖಾಸಗಿ ರಸ್ತೆ ನಿರ್ಮಿಸಿ ಸೆಬಾಸ್ಟಿಯನ್ ದರ್ಪ ಮೆರೆದಿದ್ದಾನೆ ಎನ್ನಲಾಗಿದೆ. ಕಡಂಬಿಲ ಭಾಗಕ್ಕೆ ನೂರು ವರ್ಷಗಿಂದಲೂ ಇದ್ದ ಸಂಪರ್ಕ ರಸ್ತೆಯನ್ನೇ ಕಡಿತಗೊಳಿಸಿರುವುದು ವಿಶೇಷ.
ಕಾಂಕ್ರಿಟ್ ರಸ್ತೆ ಕೊರತೆ..!
ಸೆಬಾಸ್ಟಿಯನ್ ಕಾಂಕ್ರಿಟ್ ರಸ್ತೆಯನ್ನು ಕೊರೆದಿದ್ದಾನೆ. ಸೆಬಾಸ್ಟಿಯನ್ ಕಿರುಕುಳಕ್ಕೆ ಬೇಸತ್ತು ಗ್ರಾಮಸ್ಥರು ಸಹಾಯಕ ಆಯುಕ್ತರು, ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ಅಳಲು ಕಂಡು ಏಕಾಏಕಿ ಕಡಂಬಿಲ ಭಾಗಕ್ಕೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಭೇಟಿ ನೀಡಿದ್ದಾರೆ. ದಾಖಲೆಗಳನ್ನ ಪರಿಶೀಲಿಸಿದ ವೇಳೆ ಸೆಬಾಸ್ಟಿಯನ್ ಸರ್ಕಾರಿ ಭೂಮಿ ಕಬ್ಜ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ಕಡಂಬಿಲ ಭಾಗಕ್ಕೆ ಹೋಗುವ ಕಾಂಕ್ರಿಟ್ ರಸ್ತೆಯನ್ನ ಕೊರೆದು ಅದರ ಮೇಲೆ ಮಣ್ಣು ಹಾಕಿ ರಸ್ತೆಯನ್ನ ಬಂದ್ ಮಾಡಿದ್ದಕ್ಕೆ ಸಹಾಯಕ ಆಯುಕ್ತರು ಗರಂ ಆಗಿದ್ದಾರೆ. ಮಾತ್ರವಲ್ಲ ಗೋಳಿತೊಟ್ಟು ಗ್ರಾಮ ಪಂಚಾಯತ್ ಪಿಡಿಒ ಅವರನ್ನ ಸಹಾಯಕ ಆಯುಕ್ತ ಗಿರೀಶ್ ನಂದನ್ ತರಾಟೆಗೆತ್ತಿಕೊಂಡಿದ್ದಾರೆ.
ಇಷ್ಟೆಲ್ಲ ಭೂಮಿಯನ್ನ ಕಬಳಿಕೆ ಮಾಡಿ, ಜಿಲ್ಲಾ ಪಂಚಾಯತ್ ರಸ್ತೆಯನ್ನ ಕೊರೆದವನ ವಿರುದ್ಧ ಯಾಕೇ ಕ್ರಿಮಿನಲ್ ಕೇಸ್ ದಾಖಲಿಸಿಲ್ಲ ಎಂದು ಪ್ರಶ್ನೆ ಪಿಡಿಒಗೆ ಸಹಾಯಕ ಆಯುಕ್ತ ಗಿರೀಶ್ ನಂದನ್ ಪ್ರಶ್ನೆ ಹಾಕಿದ್ದಾರೆ. ಕೂಡಲೇ ಸೆಬಾಸ್ಟಿಯನ್ ಮೇಲೆ ಕ್ರಿಮಿನಲ್ ಕೇಸ್ ಹಾಕಿ ತನಿಖೆ ಮಾಡಿ ಎಂದು ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಜೊತೆಗೆ ಕಡಂಬಿಲ ಭಾಗಕ್ಕೆ ಹಿಂದೆ ಇದ್ದ ಕಾಂಕ್ರಿಟ್ ರಸ್ತೆಯನ್ನ ಪುನರ್ ನಿರ್ಮಿಸಲು ಆಗಸ್ಟ್ 7 ರಂದು ಜಾಗದ ಸರ್ವೆ ಮಾಡಿ ಸೆಬಾಸ್ಟಿಯನ್ ಕಬ್ಜ ಮಾಡಿರುವ ಜಾಗ ಪರಿಶೀಲನೆ ಮಾಡಲು ಸೂಚನೆಯನ್ನೂ ನೀಡಲಾಗಿದೆ.
ಈ ಬಗ್ಗೆ ಕಂದಾಯ ಇಲಾಖಾಧಿಕಾರಿಗಳ ಸಹಿತ ಸ್ಥಳ ಪರಿಶೀಲನೆ ನಡೆಸಿದ ಸಹಾಯಕ ಕಮಿಷನರ್ ರವರು, ಸರಕಾರಿ ಸೊತ್ತಾಗಿರುವ ರಸ್ತೆಯನ್ನು ಹಾನಿಗೊಳಿಸಿದ ಕೃತ್ಯವೆಸಗಿದಾತನ ವಿರುದ್ದ ಇಲಾಖಾ ದೂರು ಸಲ್ಲಿಸಲು ಹಾಗೂ ಸಮರ್ಪಕ ಸರ್ವೆ ಕಾರ್ಯ ನಡೆಸಿ ಸರಕಾರಿ ಭೂಮಿಯನ್ನು ರಕ್ಷಿಸಲು ಪಂಚಾಯತ್ ಪಿಡಿಒ ರವರಿಗೆ ನಿರ್ದೇಶನ ನೀಡಿದರು.
ಈ ಸಂರ್ಭದಲ್ಲಿ ಕಂದಾಯ ನಿರೀಕ್ಷಕ ಪೃಥ್ವಿ, ಗ್ರಾಮ ಪಂಚಾಯತ್ ಅಧ್ಯಕ್ಷರು , ಪಿಡಿಒ ಮತ್ತಿತರರು ಉಪಸ್ಥಿತರಿದ್ದರು.