ನ್ಯೂಸ್ ನಾಟೌಟ್ : ಕೆಲವರು ದೇವರಲ್ಲಿ ಬೇಡುವಾಗ ದೇವರೇ ಕಷ್ಟಗಳನ್ನೆಲ್ಲಾ ದೂರ ಮಾಡು.ಆರ್ಥಿಕ ಸಂಕಷ್ಟ ತೊಲಗಿಸು,ನಾನೊಂದು ಸಾಧನೆ ಮಾಡಿ ಒಂದೊಳ್ಳೆ ಉದ್ಯೋಗ ಆಗುವಂತೆ ಕರುಣಿಸು ಅಂತೆಲ್ಲಾ ಬೇಡುತ್ತಾರೆ.ಆದರೆ ಸೌಂದರ್ಯ ಕೊಡು ಅಂತ ಬೇಡೋದು ಕಡಿಮೆ.ಯಾಕೆಂದ್ರೆ ಮಗುವಾಗಿ ಹುಟ್ಟಿದಾಗ ಮನುಷ್ಯ ಯಾವ ರೂಪವನ್ನು ಪಡೆಯುತ್ತಾನೋ ಅದೇ ರೂಪ ಜೀವನಪೂರ್ತಿ ಶಾಶ್ವತವಾಗಿರುತ್ತೆ.ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಅನ್ನುವ ಮಾತಿದೆ .ಆದರೆ ಇಲ್ಲೊಬ್ಬ ಯುವಕನೊಬ್ಬನ “ನಾನು ಸರ್ವಾಂಗ ಸುಂದನಾಗಬೇಕೆಂದು” ದೇವರಿಗೆ ಬರೆದ ಪತ್ರ ಭಾರಿ ವೈರಲ್ ಆಗಿದೆ.
ಹೌದು , ಇದು ಅಚ್ಚರಿಯಾದರೂ ನೈಜ ಘಟನೆ.ಈ ಪತ್ರ ನೋಡಿ ಹೆಚ್ಚಿನ ಎಲ್ಲರೂ ಶಾಕ್ಗೊಳಗಾಗಿದ್ದಾರೆ.ಕೆಲವು ತಿಂಗಳ ಹಿಂದೆಯಷ್ಟೇ ಯುವಕನೊಬ್ಬ ದೇವರೇ ಹುಡುಗಿ ಸೆಟ್ ಮಾಡಿಕೊಡು ಎಂದು ದೇವರಿಗೆ ಬರೆದ ಪತ್ರ ಭಾರಿ ವೈರಲ್ ಆಗಿತ್ತು.ಇದೀಗ ಅದರ ಬೆನ್ನಲ್ಲೇ ಈ ಯುವಕನ ಈ ಪತ್ರ ಭಾರಿ ಚರ್ಚೆಗೆ ಗ್ರಾಸವಾಗಿದೆ.ಚಿಕ್ಕಮಗಳೂರಿನ ದೇವಾಲ ಯವೊಂದರಲ್ಲಿ ಈ ಪತ್ರ ಕಂಡು ಬಂದಿದ್ದು ಹಿಂದೆಂದೂ ನಡೆಯದ ಈ ಘಟನೆ ಅಧಿಕಾರಿಗಳನ್ನೇ ಅಚ್ಚರಿಗೊಳಿಸುವಂತೆ ಮಾಡಿದೆ.
ಚಿಕ್ಕಮಗಳೂರಿನ ಕಳಸದ (kalasa temple) ಕಳಸೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಇಲ್ಲಿ ಭಕ್ತರು ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಹುಂಡಿಯಲ್ಲಿ ಕಾಣಿಕೆಯ ಜತೆಗೆ ಭಕ್ತರ ಹರಕೆ ಪತ್ರವೂ ಲಭ್ಯವಾಗಿದೆ. ಹುಂಡಿ ಹಣ ಎಣಿಕೆ ವೇಳೆ ಅಧಿಕಾರಿಗಳಿಗೆ ಭಕ್ತನೊಬ್ಬನ ಹರಕೆ ಪತ್ರ ನಗು ತರಿಸುವಂತೆ ಮಾಡಿದೆ.
ಭಾರಿ ಚಂದದ ಅಕ್ಷರದಲ್ಲಿ ಬರೆದು ದೇವರಿಗೆ ಪತ್ರ ಬರೆದ ಈ ಭಕ್ತ ಹುಂಡಿಗೆ ಹಾಕಿರುವ ಪತ್ರ ವೈರಲ್ ಆಗಿದೆ. ಹುಂಡಿ ಎಣಿಕೆ ಸಂದರ್ಭದಲ್ಲಿ ಭಕ್ತನ ಚೀಟಿ ಸಿಕ್ಕಿದ್ದು, ತಾಯಿ ಗಿರಿಜಾದೇವಿಗೆ ಹರಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
ಈತನ ಹೆಸರು ರಕ್ಷಿತ್ ಎಂದು.ಗಿರಿಜಾದೇವಿಗೆ ಉದ್ದಕ್ಕೆ ಬರೆದು ಪತ್ರವನ್ನು ಹುಂಡಿಗೆ ಹಾಕಿದ್ದಾನೆ.ಸರ್ವಾಂಗ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನಾನು ಒಬ್ಬ ಉತ್ತಮ ನಟ-ಫ್ಯಾಷನ್ ಮಾಡೆಲ್ ಆಗಬೇಕೆಂದು ಇಚ್ಛಿಸುತ್ತೇನೆ. ನನ್ನ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು ಎಂದು ಈ ಪತ್ರದ ಮೂಲಕ ಆಶಿಸುತ್ತಿದ್ದೇನೆ ಎಂದು ಹೇಳಿದ್ದಾನೆ.
ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲೇ ಸರ್ವಾಂಗಸುಂದರನೆಂದು ಪ್ರಖ್ಯಾತಿಯಾಗಬೇಕು. ಇದು ನಿಮ್ಮ ಭಕ್ತನ ಬೇಡಿಕೆ ಆಗಿದೆ. ನನ್ನ ಪ್ರಾರ್ಥನೆಯೊಂದೇ ನನ್ನ ಹೊಣೆ ನಿಮ್ಮ ಜವಬ್ದಾರಿ. ಹೀಗೆ ಭಕ್ತನ ಬೇಡಿಕೆಗೆ ಹುಂಡಿ ಹಣ ಎಣಿಕೆ ಅಧಿಕಾರಿಗಳು ನಕ್ಕು ಸುಮ್ಮನಾಗಿದ್ದಾರೆ.
ದೇವರಿಗೆ ಪತ್ರ ಬರೆದಿದ್ದು ಇದೇ ಹೊಸತೇನಲ್ಲ ಆದರೆ ಇದೊಂದು ವಿಚಿತ್ರ ರೀತಿಯ ನಿವೇದನೆ ಅಂತಲೇ ಹೇಳಬಹುದು.ಪ್ರಪಂಚದಲ್ಲಿ ಎಂತೆಂಥ ವ್ಯಕ್ತಿಗಳಿದ್ದಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.