ನ್ಯೂಸ್ ನಾಟೌಟ್ : ಚಾಮರಾಜನಗರ ತಾಲೂಕಿನ ಗಡಿ ಭಾಗ, ತಮಿಳುನಾಡಿನ ಹಾಸನೂರಿನಲ್ಲಿ ಕಾಡಾನೆಯೊಂದು ದಿನಸಿ ಮಳಿಗೆಯೊಂದರ ಬಾಗಿಲು ಮುರಿದು ಬಾಳೆಗೊನೆ ತಿಂದ ಘಟನೆ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ಯಾರಿಗೂ ಪ್ರಾಣಪಾಯವಾಗಿಲ್ಲ ಎನ್ನಲಾಗುತ್ತಿದೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಗಳೂರು–ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ.
ಗುರುವಾರ ರಾತ್ರಿ ಕಾಡಾನೆ ವೆಂಕಟೇಶ್ ಎಂಬುವವರಿಗೆ ಸೇರಿದ ಅಂಗಡಿಯ ಬಾಗಿಲು ಮುರಿದು ಒಳಗಡೆ ಸೊಂಡಿಲು ಹಾಕಿ ಬಾಳೆಗೊನೆ ತಿನ್ನುತ್ತಿರುವ ಚಿತ್ರ ವಿಡಿಯೊದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಸೈರನ್ ಮೊಳಗಿಸಿ ಆನೆಯನ್ನು ಓಡಿಸಲು ಯತ್ನಿಸಿದರು. ಸದ್ದು ಕೇಳಿ ಎಚ್ಚೆತ್ತ ಗ್ರಾಮಸ್ಥರೂ ಸ್ಥಳಕ್ಕೆ ಬಂದು ಕಿರುಚಾಡಲು ಆರಂಭಿಸುತ್ತಿದ್ದಂತೆ ಆನೆ ಜಾಗ ಹಿಂತಿರುಗಿದೆ ಎನ್ನಲಾಗಿದೆ.