ನ್ಯೂಸ್ ನಾಟೌಟ್ : ಹಿಂದೂ ದೇವರನ್ನು ಅವಹೇಳನ ಮಾಡಿದ ಕಾರಣಕ್ಕೆ ಪುಣೆಯ ಸಿಂಬಿಯಾಸಿಸ್ ಕಾಲೇಜು ಶಿಕ್ಷಕರೊಬ್ಬರನ್ನು ಗುರುವಾರ ಬಂಧಿಸಲಾಗಿದ್ದು, ಜತೆಗೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಅಶೋಕ್ ದೋಲೆ ಎಂಬ ಶಿಕ್ಷಕ ಪಾಠ ಮಾಡುವ ಸಮಯದಲ್ಲಿ, ಹಿಂದೂಗಳಲ್ಲಿ ಹೆಚ್ಚು ದೇವರು ಇರುವುದರಿಂದಲೇ ರಕ್ಷಣೆಗೆ ಯಾರನ್ನು ಕರೆಯಬೇಕೆಂದು ಗೊತ್ತಾಗದೆ ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿತ್ತು. ಕಾಲೇಜು ಆಡಳಿತ ಮಂಡಳಿ ಅಶೋಕ್ ಅವರನ್ನು ಅಮಾನತು ಮಾಡಿದೆ. ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲೂ ಇಂತಹ ಕೆಲ ಘಟನೆಗಳು ಸಾಮಾಜಿಕ ಜಾಲತಾಣ ಕ್ಲಬ್ಹೌಸ್ನಲ್ಲಿ ಹಿಂದೂ ದೇವರುಗಳನ್ನು ಅವಹೇಳನ ಮಾಡಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಶ್ರೀರಾಮ, ಸೀತೆ, ಹನುಮಂತ ದೇವರನ್ನು ಶ್ರೀರಾಮ ಸಲಿಂಗಕಾಮಿ, ರಾಮನಿಗೆ ಹಂದಿ ಮಾಂಸ ಇಷ್ಟ ಎಂದು ಅಶ್ಲೀಲವಾಗಿ ಅವಹೇಳನ ಮಾಡಿದ್ದಾರೆ. ಇದು ಹಿಂದೂಗಳ ಧಾರ್ಮಿಕ ನಂಬಿಕೆ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿ.ಎಚ್.ಪಿ ಒತ್ತಾಯಿಸಿತ್ತು.
ಈ ಹಿಂದೆ ಕರಾವಳಿಯ ಉಡುಪಿಯಲ್ಲಿ ಹಿಂದೂ ದೇವರ ಅವಹೇಳನ, ಅಪಹಾಸ್ಯ ಮಾಡುವಂತಹ ಕೃತ್ಯಗಳನ್ನು ಖಂಡಿಸಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗಿತ್ತು.
ಸಾಮೂಹಿಕ ಪ್ರಾರ್ಥನೆಯ ಅಂಗವಾಗಿ ಕದ್ರಿ ಶ್ರೀಮಂಜುನಾಥೇಶ್ವರ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, ಪದವಿನಂಗಡಿ ಕೊರಗಜ್ಜನ ಕ್ಷೇತ್ರ, ಪಣೋಲಿ ಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನ ಸೇರಿದಂತೆ ಕರಾವಳಿಯ 1000ಕ್ಕೂ ಹೆಚ್ಚಿನ ದೇವಸ್ಥಾನ, ದೈವಸ್ಥಾನ ಮತ್ತು ಭಜನಾ ಮಂದಿರಗಳಲ್ಲಿ ಪ್ರಾರ್ಥನೆ ನಡೆದಿತ್ತು. ಇಂತಹ ಘಟನೆಗಳ ಬಗ್ಗೆ ಕರಾವಳಿಯಲ್ಲಿ ಆಗಾಗ ಜಾಗೃತಿ ಮೂಡಿಸಿದ್ದರೂ ದೇಶದೆಲ್ಲೆಡೆ ಇಂತಹ ಘಟನೆಗಳು ನಡೆಯುತ್ತಿವೆ.