ಸುಳ್ಯ: ಸುಳ್ಯದ ಅಂಬೆಟಡ್ಕದಲ್ಲಿ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನ ‘ಪ್ರೆಸ್ ಕ್ಲಬ್ ‘ ಕಟ್ಟಡದ ಕಾಮಗಾರಿ ಭಾನುವಾರ ಆರಂಭಗೊಂಡಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರು ದೀಪ ಬೆಳಗಿಸಿ, ಅಡಿಪಾಯಕ್ಕೆ ಶಿಲೆ ಇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಎಲ್ಲರ ಸಹಕಾರದಲ್ಲಿ ಪತ್ರಕರ್ತರ ಸಮುದಾಯ ಭವನ ಆದಷ್ಟು ಶೀಘ್ರ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.ಮನವಿ ಪತ್ರವನ್ನು ಬಿಡುಗಡೆ ಮಾಡಿ ಮಾತಾನಾಡಿದ ಬೆಳ್ಳಾರೆಯ ಕಾಮಧೇನು ಗ್ರೂಪ್ಸ್ ನ ಮಾಲಕ ಎಂ.ಮಾಧವ ಗೌಡ ಬೆಳ್ಳಾರೆ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಸುಳ್ಯ ತಾಲೂಕಿನ ಪತ್ರಕರ್ತರ ಚಟುವಟಿಕೆಗಳಿಗೆ ಪ್ರೆಸ್ ಕ್ಲಬ್ ನಿರ್ಮಾಣ ಅತೀ ಅಗತ್ಯವಾಗಿದೆ. ಎಲ್ಲರ ಸಹಕಾರದಲ್ಲಿ ಅತೀ ಶೀಘ್ರದಲ್ಲಿ ಪ್ರೆಸ್ ಕ್ಲಬ್ ಕಟ್ಟಡ ಪೂರ್ತಿಯಾಗಲಿ ಎಂದು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮಾತನಾಡಿ ಪತ್ರಕರ್ತರ ಸಮುದಾಯ ಭವನ ನಿರ್ಮಣಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.
ಉದ್ಯಮಿ ಇಬ್ರಾಹಿಂ ಕತ್ತರ್ ಮಂಡೆಕೋಲು, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಶೀಲಾ ಅರುಣ ಕುರುಂಜಿ ಶುಭ ಹಾರೈಸಿದರು. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಲಿಟ್ಲ್ ಫ್ಲವರ್ ಸಂಸ್ಥೆಯ ನೆಲ್ಸನ್, ಪ್ರಮುಖರಾದ ಜಯಪ್ರಕಾಶ್, ರಜತ್ ಅಡ್ಕಾರು ಮತ್ತಿತರರು ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ವಂದಿಸಿದರು. ಕೋಶಾಧಿಕಾರಿ ಯಶ್ವಿತ್ ಕಾಳಂಮನೆ, ನಿರ್ದೇಶಕರಾದ ಗಂಗಾಧರ ಮಟ್ಟಿ, ಜಯಪ್ರಕಾಶ್ ಕುಕ್ಕೆಟ್ಟಿ, ಜೆ.ಕೆ.ರೈ, ಕೃಷ್ಣ ಬೆಟ್ಟ, ದುರ್ಗಾಕುಮಾರ್ ನಾಯರ್ ಕೆರೆ, ಗಿರೀಶ್ ಅಡ್ಪಂಗಾಯ, ಶರೀಫ್ ಜಟ್ಟಿಪಳ್ಳ, ಶಿವಪ್ರಸಾದ್ ಕೇರ್ಪಳ, ಈಶ್ವರ ವಾರಣಾಸಿ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ್ ಮಾವಂಜಿ, ಕೋಶಾಧಿಕಾರಿ ದಯಾನಂದ ಕೊರತ್ತೋಡಿ, ಪತ್ರಕರ್ತರಾದ ಹಸೈನಾರ್ ಜಯನಗರ, ರಮೇಶ್ ನೀರಬಿದಿರೆ, ಗಣೇಶ್ ಕುಕ್ಕುದಡಿ, ಭಾಗೀಶ್.ಕೆ.ಟಿ, ಪ್ರಜ್ಞಾ ಎಸ್.ನಾರಾಯಣ್, ವಿನಯ ಜಾಲ್ಸೂರು, ಮಧುಕೃಷ್ಣ ಉಪಸ್ಥಿತರಿದ್ದರು.