ನ್ಯೂಸ್ ನಾಟೌಟ್ : ಸುಳ್ಯದಲ್ಲಿ ನಡೆದ ಬೃಹತ್ ತಾಳೆ ಬೆಳೆ ನಾಟಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯ ಉದ್ಘಾಟಿಸಿ ಅಗತ್ಯ ಅನುದಾನವನ್ನು ತರಿಸಿಕೊಡಲು ಕ್ರಮವಹಿಸಲಾಗುವುದು ಎಂಬ ಭರವಸೆ ನೀಡಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಹಾಗೂ 3F ಆಯಿಲ್ ಪಾಮ್ ಪ್ರೈ. ಲಿ. ಸಹಭಾಗಿತ್ವದಲ್ಲಿ ಶ್ರೀಮತಿ ಸೀಮಾ ಆಳ್ವ ಕೋಂ ಗಣೇಶ ಆಳ್ವ ರವರ ಸರ್ವೆ ನಂ 308/2 ರಲ್ಲಿ ಒಟ್ಟು 1.04 ಹೆ ಪ್ರದೇಶದಲ್ಲಿ ಒಟ್ಟು 150 ವಿದೇಶಿ ತಳಿಯ ತಾಳೆ ಸಸಿಗಳನ್ನು ನಾಟಿ ಮಾಡಿ ತಾಳೆ ಬೆಳೆ ಬೃಹತ್ ನಾಟಿ ಅಂದೋಲನ ಕಾರ್ಯಕ್ರಮಕ್ಕೆ (ಆ.೩) ಇಂದು ಶಾಸಕಿ ಕು. ಭಾಗಿರಥಿ ಮುರುಳ್ಯ ಚಾಲನೆ ನೀಡಿದರು.
ಸುಳ್ಯ ವಿಧಾನಸಭಾ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯ ಕಾರ್ಯಕ್ರಮದ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಶಾಸಕರು ಸುಳ್ಯ ರೈತ ಭಾಂದವರಿಗೆ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಸಸಿ ನಾಟಿ ಮಾಡಲು ಪ್ರೇರೇಪಿಸಬೇಕು ಎಂದರು ಮತ್ತು ಅಗತ್ಯ ಅನುದಾನವನ್ನು ತರಿಸಿಕೊಡಲು ಕ್ರಮವಹಿಸಲಾಗುವುದು ಎಂಬ ಭರವಸೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ತಾಳೆ ಬೆಳೆ ಬೆಳೆದ ರೈತ ಭಾಂದವರು ಹಾಗೂ ಬೆಳೆಯಲು ಇಚ್ಛಿಸುವ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.
ತಾಳೆ ಬೆಳೆ ಬೆಳೆದ ಪ್ರಗತಿ ಪರ ರೈತರ ತಮ್ಮ ಅನಿಸಿಕೆಗಳನ್ನು ರೈತರೊಂದಿಗೆ ಹಂಚಿಕೊಂಡರು ಹಾಗೂ ಭಾಗವಹಿಸಿದ ರೈತರಿಗೆ ತಾಳೆ ಬೆಳೆ ಕೃಷಿ ಬೇಸಾಯದ ಕರ ಪತ್ರ ನೀಡಲಾಯಿತು .ಈ ಸಂದರ್ಭದಲ್ಲಿ ಹಿ.ಸ.ತೋ.ನಿ ರವರಾದ ರಮೇಶ ಕೆ ಎಂ ,ಪ್ರಭಾರೆ ಸ.ತೋ.ನಿ ರವರಾದ ಅರಬಣ್ಣ ಪೂಜೇರಿ ಹಾಗೂ ಸ.ತೋ.ಅ ರಾದ ವಿಜೇತ್ ಮತ್ತು ಜಗದೀಶ ಹಾಗೂ 3 ಎಫ್ ಕಂಪನಿಯ ರವಿಶಂಕರ ಉಪಸ್ಥಿತರಿದ್ದರು.