ನ್ಯೂಸ್ ನಾಟೌಟ್: ಮಕ್ಕಳಿಂದ ಮೊಬೈಲ್ ಫೋನ್ ಮತ್ತು ಅದರ ಪರಿಕರಗಳಿಂದ ದೂರ ಇಡಬೇಕು ಅನ್ನುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ 8 ತಿಂಗಳ ಮಗುವೊಂದು ಚಾರ್ಜರ್ ವೈರ್ ಅನ್ನು ಬಾಯಿಗೆ ಹಾಕಿ ವಿದ್ಯುತ್ ಶಾಕ್ನಿಂದ ಮೃತಪಟ್ಟ ಘಟನೆ ನಡೆದಿದೆ.
ಕಾರವಾರ ತಾಲೂಕಿನ ಸಿದ್ದರ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ. ಸಂತೋಷ್ ಹಾಗೂ ಸಂಜನಾ ದಂಪತಿಯ ಮಗು ಸಾನಿಧ್ಯ ಎಂದು ಗುರುತಿಸಲಾಗಿದೆ.
ಮನೆಯಲ್ಲಿ ಪೋಷಕರು ತಮ್ಮ ಮೊಬೈಲ್ ಫೋನ್ ಅನ್ನು ಚಾರ್ಜ್ ಗೆ ಇಟ್ಟಿದ್ದಾರೆ. ಬಳಿಕ ಮೊಬೈಲ್ ಮಾತ್ರ ತೆಗೆದುಕೊಂಡು ಚಾರ್ಜರ್ ಅನ್ನು ಆನ್ನಲ್ಲಿಯೇ ಬಿಟ್ಟಿದ್ದಾರೆ.
ಮಗು ಆಟವಾಡುತ್ತಾ ಚಾರ್ಜ್ ಇರುವ ಬಳಿ ಹೋಗಿದೆ. ಚಾರ್ಜರ್ನ ತುದಿಯನ್ನು ಬಾಯಿಗೆ ಹಾಕಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಮಗು ಸ್ಥಳದಲ್ಲೇ ಸಾವಿಗೀಡಾಗಿದೆ.
ಮಕ್ಕಳು ಇರುವ ಮನೆಯ ಪೋಷಕರು ಹೆಚ್ಚು ಜಾಗರೂಕರಾಗಿ ಇರಬೇಕು. ಮೊಬೈಲ್ ಚಾರ್ಚ್ ಅನ್ನು ಮಕ್ಕಳಿಗೆ ಎಟುಕದಂತೆ ಇಟ್ಟು ಚಾರ್ಜ್ ಮಾಡಬೇಕು. ಬಳಿಕ ಚಾರ್ಚರ್ ಅನ್ನು ಆಫ್ ಮಾಡಬೇಕು. ಅಜಾಗರೂಕತೆಯಿಂದ ಸಂಭವಿಸಬಹುದಾದ ದುರಂತದಿಂದ ಜಾಗೃತರಾಗಿರಬೇಕು.