ಕ್ರೈಂವೈರಲ್ ನ್ಯೂಸ್

ವೃದ್ಧ ದಂಪತಿಯಿಂದ 7 ವರ್ಷದ ಹಿಂದೆ ನಾಪತ್ತೆಯಾದ ಮಗ ಸತ್ತಿದ್ದಾನೆಂದು ಪಿಂಡ ಪ್ರದಾನ..! ಮಾಂತ್ರಿಕ ಹೇಳಿದ ಬೆನ್ನಲ್ಲೇ ನಡೆದ ಆ ವಿಸ್ಮಯವೇನು?

51
Spread the love

ನ್ಯೂಸ್‌ ನಾಟೌಟ್‌: ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿಹೋಗಿದ್ದ ಮಗ, ಏಳು ವರ್ಷಗಳಾದರೂ ಪೋಷಕರು ಹಾಗೂ ಬಂಧು ಮಿತ್ರರ ಸಂಪರ್ಕದಿಂದ ನಾಪತ್ತೆಯಾಗಿದ್ದ. ಆತ ಬದುಕಿರಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಪೋಷಕರು, ಅಂತಿಮ ವಿಧಾನಗಳನ್ನು ಪೂರೈಸಿದ್ದರು. ಆದರೆ ಅವರಿಗೆ ಅಚ್ಚರಿಯೊಂದು ಕಾದಿತ್ತು. ಸತ್ತಿದ್ದಾನೆ ಎಂದುಕೊಂಡಿದ್ದ ಮಗ, ಏಳು ವರ್ಷದ ನಂತರ ಜೀವಂತವಾಗಿ ಕಣ್ಣೆದುರು ಬಂದು ನಿಂತಿದ್ದದ್ದು ಎಲ್ಲರನ್ನೂ ದಿಗ್ಮೂಢರನ್ನಾಗಿಸಿತ್ತು.

ಬಿಹಾರದ ಪಾಟ್ನಾದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಕಾಣೆಯಾದ ಮಗನಿಗಾಗಿ ಈ ವೃದ್ಧ ದಂಪತಿ ಎಲ್ಲೆಲ್ಲಿ ಸಾಧ್ಯವೋ ಎಲ್ಲಾ ಕಡೆಯೂ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯೂ ಆತನ ಸುಳಿವು ಸಿಕ್ಕಿರಲಿಲ್ಲ. ಕರುಳ ಕುಡಿಯನ್ನು ಪತ್ತೆ ಮಾಡುವ ಪ್ರಯತ್ನದಲ್ಲಿ ಹೈರಾಣಾದ ಅವರು, ಹತಾಶೆಯಿಂದ ತಲೆ ಮೇಲೆ ಕೈ ಹೊತ್ತಿದ್ದರು. ಹೀಗೆ ನಾಪತ್ತೆಯಾಗಿದ್ದ ಮಗ, ತನ್ನ ಪೋಷಕರ ಜತೆ ಮತ್ತೆ ಸೇರಿಕೊಂಡಿದ್ದಾನೆ. ಗ್ರಾಮದ ಮುಖ್ಯಸ್ಥರು ಈ ಪೋಷಕರನ್ನು ಸಂಪರ್ಕಿಸಿ ನಿಮ್ಮ ಮಗ ಇರುವ ಜಾಗ ತಮಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಅಪಘಾತಕ್ಕೆ ಒಳಗಾಗಿದ್ದ ಬಿಹಾರಿ ರೈ ಎಂಬಾತನನ್ನು ಯಾರೋ ಆಸ್ಪತ್ರೆಗೆ ದಾಖಲಿಸಿದ್ದರಂತೆ. ಅಲ್ಲಿಂದ ದಿಲ್ಲಿಯ ಸಂಸ್ಥೆಯೊಂದು ಆತನನ್ನು ತನ್ನಲ್ಲಿ ಸೇರಿಸಿಕೊಂಡು ಆಶ್ರಯ ನೀಡಿತ್ತು. ಅದರ ಸದಸ್ಯರ ಜತೆಗೇ ಆತ ವಾಸವಾಗಿದ್ದ. ಆತನನ್ನು ಕುಟುಂಬದ ಜತೆ ಸೇರಿಸಲು ಪ್ರಯತ್ನ ನಡೆಸಿದ್ದ ಸಂಸ್ಥೆಯು, ಕೊನೆಗೂ ಪಂಚಾಯತಿ ಮುಖ್ಯಸ್ಥನನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಯಿತು.

ಬಿಹಾರಿ ರೈನ ಫೋಟೋವನ್ನು ಅವರಿಗೆ ಕಳುಹಿಸಿ, ಗುರುತು ದೃಢಪಡಿಸುವಂತೆ ಕೇಳಿತ್ತು. ಪಂಚಾಯತಿ ಮುಖ್ಯಸ್ಥರೇ ಹಣ ಹಾಕಿ, ಬಿಹಾರಿಯನ್ನು ಆತನ ಕುಟುಂಬದ ಜತೆ ಮತ್ತೆ ಸೇರುವಂತೆ ಮಾಡಿದ್ದಾರೆ. ದಿಲ್ಲಿಯಿಂದ ಆತನನ್ನು ಹಳ್ಳಿಗೆ ಕರೆತರಲು ವ್ಯವಸ್ಥೆ ಮಾಡಿದ್ದಾರೆ. ಕುಟುಂಬದವರ ಪ್ರಕಾರ, ಬಿಹಾರಿ ಮನೆ ಬಿಟ್ಟಾಗ ಆತನ ವಯಸ್ಸು ಸರಿಸುಮಾರು 30 ವರ್ಷವಾಗಿತ್ತು ಎನ್ನಲಾಗಿದೆ.

ಆತ ಮನೆ ತೊರೆಯುವ ಕೆಲವು ದಿನಗಳಿಗೂ ಮುನ್ನ ಹೆಂಡತಿ ಮೃತಪಟ್ಟಿದ್ದಳು. ಮಗನನ್ನು ಹುಡುಕುವುದು ಪೋಷಕರಿಗೆ ಸಾಧ್ಯವಾಗದೆ ಇದ್ದಾಗ, ವಾಮಾಚಾರ ಮಾಡುವ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ನಿಮ್ಮ ಮಗ ಸತ್ತು ಹೋಗಿದ್ದು, ಆತನನ್ನು ಹುಡುಕಿ ಪ್ರಯೋಜನವಿಲ್ಲ. ಸಾವಿಗೆ ಅಂತಿಮ ವಿಧಾನಗಳನ್ನು ನೆರವೇರಿಸಿ ಎಂದು ಮಾಂತ್ರಿಕ ಸಲಹೆ ನೀಡಿದ್ದ. ಅದನ್ನು ನಂಬಿದ್ದ ಪೋಷಕರು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ನೆರವೇರಿಸಿದ್ದರು ಎನ್ನಲಾಗಿದೆ.

See also  ಶವದೊಂದಿಗೆ 600 ಕಿ.ಮೀ ರೈಲಿನಲ್ಲಿ ಪ್ರಯಾಣಿಸಿದ್ದೇಕೆ ಆತ..? ರೈಲಿನಲ್ಲಿದ್ದ ಜನ ಏನಂದ್ರು? ಏನಿದು ಮನಕಲಕುವ ಘಟನೆ?
  Ad Widget   Ad Widget   Ad Widget   Ad Widget