ನ್ಯೂಸ್ ನಾಟೌಟ್ : ಜಗತ್ತಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ.ಒಂದೊಂದು ಸಲ ವೈದ್ಯರಿಗೂ ಸವಾಲೆನಿಸುವ ಕಾಯಿಗಳು ಕಾಣಿಸಿಕೊಲ್ಳುತ್ತವೆ. ಆದರೆ ಈ ಘಟನೆ ಮಾತ್ರ ಅವೆಲ್ಲದಕ್ಕು ವಿಭಿನ್ನವೆಂಬಂತಿದೆ. ತಾಯಿಯ ಗರ್ಭದಲ್ಲಿ ಭ್ರೂಣವಿರುವುದು ಹೊಸತೇನಲ್ಲ..! ಆದರೆ 7 ತಿಂಗಳ ಮಗುವಿನ ಹೊಟ್ಟೆಯಲ್ಲೂ 2 ಕೆ.ಜಿ. ಭ್ರೂಣವಿದೆಯೆಂದರೆ ನೀವು ನಂಬ್ತೀರಾ? ಖಂಡಿತ ನಂಬಲಸಾಧ್ಯವಾದ ಮಾತು.
ಹೌದು ಇದು ನಾವು ಆಶ್ಚರ್ಯಪಡಬೇಕಾದ ವಿಚಾರ..!, ಅದು ಕೂಡ ಗಂಡುಮಗುವಿನ ಹೊಟ್ಟೆಯಲ್ಲಿ ಅಂದರೆ ಒಂಚೂರು ನಂಬಿಕೆಯೇ ಬರಲ್ಲ..ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಏಳು ತಿಂಗಳ ಕೂಸಿನ ಹೊಟ್ಟೆಯಲ್ಲಿ 2 ಕೆ.ಜಿ. ತೂಕದ ಭ್ರೂಣವನ್ನು ವೈದ್ಯರು ಇದೀಗ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಪ್ರತಾಪಗಢ ಮೂಲದ ರೈತರೊಬ್ಬರ 7 ತಿಂಗಳ ಮಗು ಆಗಾಗ ಹೊಟ್ಟೆ ನೋವಿನಿಂದ ಅಳುತ್ತಿದ್ದು, ಹಲವು ವೈದ್ಯರಿಗೆ ತೋರಿಸಿದರೂ ಪ್ರಯೋಜನವಾಗಿರಲಿಲ್ಲ.ಕೊನೆಗೆ ಮಗುವಿನ ತಂದೆ, ಇಲ್ಲಿನ ಸರೋಜಿನಿ ನಾಯ್ಡು ಮಕ್ಕಳ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಮಗುವಿಗೆ ಸಿಟಿ ಸ್ಕ್ಯಾನ್ ಮಾಡಿದಾಗ ಮಗುವಿನ ಹೊಟ್ಟೆಯಲ್ಲಿ 2 ಕೆಜಿ ಭ್ರೂಣವಿದೆ ಎಂದು ತಿಳಿದುಬಂತು.ಕೊನೆಗೆ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಬರೋಬ್ಬರಿ 4 ಗಂಟೆಗಳ ಆಪರೇಷನ್ ಮಾಡಿದ ಬಳಿಕ ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಸದ್ಯ ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ತೀರಾ ಅಪರೂಗಳಲ್ಲಿ ಒಂದು..ವೈದ್ಯಕೀಯ ರಂಗದಲ್ಲಿಯೇ ಇಂತಹ ಪ್ರಕರಣ ಅಪರೂಪವಾಗಿದ್ದು, ತಾಯಿಯ ಗರ್ಭದಲ್ಲಿ ಎರಡು ಭ್ರೂಣಗಳು ರೂಪುಗೊಂಡು, ಈ ಪೈಕಿ ಒಂದು ತಾಯಿಯ ಗರ್ಭದಲ್ಲಿ ಬೆಳೆದರೆ,ಮತ್ತೊಂದು ಹೊಟ್ಟೆಯಲ್ಲಿರುವ ಮತ್ತೊಂದು ಮಗುವಿನ ಗರ್ಭದಲ್ಲಿ ಬೆಳವಣಿಗೆಯಾಗುತ್ತದೆ.ಕೇರಳದ ಮೂಲದ 45 ವರ್ಷದ ಮಹಿಳೆಯೊಬ್ಬರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ನಿರ್ಧರಿಸಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವೇಳೆ ಮಹಿಳೆಯ ದೇಹದಲ್ಲಿದ್ದ ಸುಮಾರು ಎರಡೂವರೆ ಕೆಜಿ ತೂಕದ ಗಡ್ಡೆಯನ್ನು ಶಿರಾ ಸರಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.ಮಹಿಳೆಯು ಹೈಪರ್ ಥೈರಾಯ್ಡ್ ಹಾಗೂ ಸ್ಥೂಲಕಾಯದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ವೈದ್ಯರಾದ ಡಾ.ನರೇಂದ್ರಬಾಬು, ಡಾ.ರಘು, ಡಾ.ರಾಘವೇಂದ್ರ ಅವರು ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಮಹಿಳೆಯ ದೇಹದಿಂದ ಎರಡೂವರೆ ಕೆಜಿ ತೂಕದ ಬ್ರಾಡ್ ಲಿಗಮೆಂಟ್ ಫೈಬ್ರಾಡ್ ತೆಗೆದುಹಾಕಿದ್ದಾರೆ.