ನ್ಯೂಸ್ ನಾಟೌಟ್ : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಘಟಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ನೇಮಕ ಇಂದು ಕರಿಕೆ ವಿ.ಯಸ್.ಯಸ್.ಯನ್.ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯರಾದ ಕೋಡಿ ಪೊನ್ನಪ್ಪ ದೀಪ ಉಜ್ವಲಿಸಿ ಉದ್ಘಾಟಿಸಿದರು. ಬಳಿಕ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭ ಪರಿಷತ್ ಅಧ್ಯಕ್ಷರಾಗಿ ಜಯಪ್ರಕಾಶ್ ಗುಡ್ಡೆಮನೆ, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿಯಾಗಿ ಜಯಂತ್ ಪೆತ್ತಾಜೆ , ಬಜರಂಗದಳ ಸಂಚಾಲಕರಾಗಿ ವಿನೋದ್ ಕುಮಾರ್, ಸಹಸಂಚಾಲಕರಾಗಿ ರಕ್ಷಿತ್ ಕಂಡಿಗೆ, ವಿಶ್ವಹಿಂದೂ ಪರಿಷತ್ ಸೇವಾ ಪ್ರಮುಖ್ ಕೋಡಿ ಭಾರ್ಗವ ಜಯಪ್ರಕಾಶ್, ವಿಶ್ವ ಹಿಂದೂ ಪರಿಷತ್ ಸತ್ಸಂಗ ಪ್ರಮುಖ್ ರಾಜೇಶ್ ಚೆತ್ತುಕಾಯ, ಬಜರಂಗದಳ ಗೋರಕ್ಷಕ ಪ್ರಮುಖ್ ಪ್ರಸನ್ನ ಕುಮಾರ್, ಬಜರಂಗದಳ ಸುರಕ್ಷಾ ಪ್ರಮುಖ್ ದಿಲೀಪ್ ಕುಮಾರ್, ಬಜರಂಗದಳ ಅಖಾಡ ಪ್ರಮುಖ್ ಚೇತನ್ ಹುಲಿ ಮನೆ ಆಯ್ಕೆಯಾದರು.
ಬಳಿಕ ಸುಳ್ಯ ತಾಲೂಕಿನ ವಿಶ್ವ ಹಿಂದೂ ಪರಿಷತ್ನ ಅಧ್ಯಕ್ಷರಾದ ಸೋಮಶೇಖರ ಪೈಕ ನೂತನ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಜವಾಬ್ದಾರಿ ನೀಡಿದರು . ಈ ಸಂದರ್ಭದಲ್ಲಿ ವೇದಿಕೆ ಯಲ್ಲಿ ಪ್ರಮುಖರಾದ , ಸುಳ್ಯ ತಾಲೂಕಿನ ವಿಶ್ವ ಹಿಂದೂ ಪರಿಷತ್ ಸಹಕಾರ್ಯದರ್ಶಿ ಬಾನು ಪ್ರಕಾಶ್ ಪೆರುಮುಂಡ, ಸುಳ್ಯ ತಾಲೂಕಿನ ಬಜರಂಗದಳದ ಸಂಚಾಲಕರಾದ ಹರಿಪ್ರಸಾದ್ ಎಲಿಮಲೆ, ಹೊಸ ಮನೆ ಹರೀಶ್ ಉಪಸ್ಥಿತರಿದ್ದರು. ಪ್ರದೀಪ್ ಕರಿಕೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು.