ನ್ಯೂಸ್ ನಾಟೌಟ್ : ಪಬ್ಜಿ ಗೇಮ್ ಆಡುತ್ತಾ ಭಾರತದ ಯುವಕನೊಂದಿಗೆ ಪ್ರೀತಿ ಚಿಗುರಿ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನಿ ವಿವಾಹಿತ ಮಹಿಳೆ ಭಾರತಕ್ಕೆ ಬಂದಿರುವ ಸುದ್ದಿ ಭಾರಿ ವೈರಲ್ ಆಗಿತ್ತು.ಇದೀಗ ಆಕೆಗೆ ಬಾಲಿವುಡ್ ನಿರ್ಮಾಪಕರು ಸಿನಿಮಾದಲ್ಲಿ ಆಫರ್ ನೀಡಿದ್ದಾರೆನ್ನುವ ವಿಚಾರ ಸದ್ಯಕ್ಕೆ ಸುದ್ದಿಯಾಗುತ್ತಿದೆ..!
ಸೀಮಾ ಹೈದರ್ ಮೇಲೆ ಗೂಢಚಾರಿಣಿ ಎಂಬ ಆರೋಪ ಇರೋದ್ರಿಂದ ಯುಪಿ ಎಟಿಎಸ್ ತನಿಖೆ ನಡೆಸುತ್ತಿದ್ದು, ಅದರ ಬೆನ್ನಲ್ಲೇ ಪ್ರಮುಖ ಚಲನಚಿತ್ರ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ಸೀಮಾ ಹೈದರ್ಗೆ ಪಾತ್ರ ನೀಡಿದ್ದಾರೆನ್ನುವ ಸುದ್ದಿ ಕೇಳಿ ಬಂದಿದೆ.
ಮುಂಬೈನಲ್ಲಿ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿರುವ ಮೀರತ್ನ ಅಮಿತ್ ಜಾನಿ, ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದಾರೆ.ಸದ್ಯ ಅಮಿತ್ ಜಾನಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೀಮಾ ಹೈದರ್ ಮತ್ತು ಸಚಿನ್ ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನಾನು ಆಫರ್ ನೀಡಿದ್ದೇನೆ. ಸೀಮಾ ಹೈದರ್ ಅಕ್ರಮವಾಗಿ ಭಾರತ ಪ್ರವೇಶಿಸಿದ ರೀತಿಯನ್ನು ನಾನು ಬೆಂಬಲಿಸುವುದಿಲ್ಲ. ಆದರೆ ದಂಪತಿಯ ಆರ್ಥಿಕ ಸ್ಥಿತಿಯ ಬಗ್ಗೆ ನನಗೆ ತಿಳಿದಿದೆ. ಹೀಗಾಗಿ ಮುಂಬರುವ ಯಾವುದೇ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಮಹಿಳೆಗೆ ಪಾತ್ರವನ್ನು ನೀಡುವುದಾಗಿ ಅಮಿತ್ ಜಾನಿ ವೈರಲ್ ವೀಡಿಯೊದಲ್ಲಿ ಹೇಳಿದ್ದಾರೆ.
ಅಮಿತ್ ಜಾನಿ ಇತ್ತೀಚೆಗೆ ತಮ್ಮ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಸದ್ಯದಲ್ಲಿಯೇ ನೂಪುರ್ ಶರ್ಮಾ ಪ್ರತಿಭಟನೆಯ ವೇಳೆ ಹತ್ಯೆಯಾದ ಕನ್ಹಯ್ಯಾ ಲಾಲ್ ಸಾಹು ಅವರ ಹತ್ಯೆಯನ್ನು ಆಧರಿಸಿದ ಚಿತ್ರವನ್ನು ಅಮಿತ್ ಜಾನಿ ಬಿಡುಗಡೆ ಮಾಡಲಿದ್ದಾರೆ ಎನ್ನುವ ವಿಚಾರ ಕೇಳಿ ಬಂದಿದೆ.
ಈ ಹಿಂದೆ, ಸೀಮಾ ಹೈದರ್ ಮತ್ತು ಸಚಿನ್ ಅವರಿಬ್ಬರ ವಿರುದ್ಧ ನಡೆಯುತ್ತಿರುವ ತನಿಖೆಯಿಂದಾಗಿ,ಅವರಿಗೆ ಯಾವುದೇ ಕೆಲಸ ಸಿಗುತ್ತಿಲ್ಲ,ಇದರಿಂದಾಗಿ ಜೀವನ ನಡೆಸುವುದೇ ದುಸ್ತರವಾಗಿದೆ.ಕುಟುಂಬಕ್ಕೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ.ದಂಪತಿ ಪರಿಸ್ಥಿತಿ ಮನಗಂಡು ಇದೀಗ ಮುಂಬೈ ನಿರ್ಮಾಪಕ ಅಮಿತ್ ಜಾನಿ ಅವರು ತಮ್ಮ ಚಲನಚಿತ್ರದಲ್ಲಿ ಸೀಮಾ ಹೈದರ್ ಅವರಿಗೆ ಒಂದು ಪಾತ್ರವನ್ನು ನೀಡಲು ಮುಂದಾಗಿದ್ದಾರೆ.ಈ ಮೂಲಕ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.ಸೀಮಾ ಹೈದರ್ ಸಚಿನ್ ಮೀನಾ ಮತ್ತು ಆತನ ಕುಟುಂಬದ ಸಹಾಯದಿಂದ ನಕಲಿ ದಾಖಲೆಗಳನ್ನು ತೋರಿಸಿ ನೇಪಾಳದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು.