ನ್ಯೂಸ್ ನಾಟೌಟ್: ಯುರೋಪಿಯನ್ ಉಪಗ್ರಹ ಅಯೋಲಸ್ ಭೂಮಿಯ ಕಕ್ಷೆಯನ್ನು ಪ್ರವೇಶಿಸುವ ಪ್ರಯತ್ನದಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಪತನಗೊಂಡಿದೆ ಎಂದು ವರದಿ ತಿಳಿಸಿದೆ.
ಐದು ವರ್ಷಗಳ ಕಾರ್ಯಾವಧಿಯ ಬಳಿಕ ಅಯೋಲಸ್ನ ಇಂಧನ ಕಾಲಿಯಾಗಿದ್ದು ಈ ವಾರ ಭೂಮಿಯತ್ತ ಮರಳಲಿದೆ ಎನ್ನಲಾಗಿದೆ. ನೈಸರ್ಗಿಕವಾಗಿ ಭೂಮಿಯ ವಾತಾವರಣದ ಮೂಲಕ ಹಿಂತಿರುಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಇಎಸ್ಎ ಹೇಳಿತ್ತು. ಇದು ಕಳೆದ ಸೋಮವಾರ 174 ಮೈಲುಗಳಷ್ಟು ಎತ್ತರದಲ್ಲಿತ್ತು. ಆ ಬಳಿಕ ಜರ್ಮನಿಯ ನಿಯಂತ್ರಣ ಕೇಂದ್ರದ ವಿಜ್ಞಾನಿಗಳು ಇದನ್ನು ಕೆಳಕಕ್ಷೆಗೆ ಎಳೆದು ತರುವ ಸರಣಿ ಕಾರ್ಯಕ್ಕೆ ಚಾಲನೆ ನೀಡಿದರು.
ಕ್ರಮೇಣ 142 ಮೈಲುಗಳಷ್ಟು ಕೆಳಗಿಳಿದ ಬಳಿಕ ಅಂತಿಮವಾಗಿ 75 ಮೈಲುಗಳಷ್ಟು ಕೆಳಗಿಳಿಸಿ, ಐದು ಗಂಟೆಯ ಬಳಿಕ ಅಟ್ಲಾಂಟಿಕ್ ಸಾಗರದತ್ತ ತಿರುಗಿಸಲಾಗಿದೆ ಎಂದು ಇಎಸ್ಎ ಮಾಹಿತಿ ನೀಡಿದೆ.
ಹವಾಮಾನ ನಿಗಾ ಉಪಗ್ರಹವಾದ ಅಯೋಲಸ್ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಭೂಮಿಯ ಕಕ್ಷೆಗೆ ನಿಯಂತ್ರಿತ ಮರುಪ್ರವೇಶ ಪಡೆಯುವಂತೆ ವಿನ್ಯಾಸಗೊಳಿಸಿಲ್ಲ. ಆದರೆ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿ(ಇಎಸ್ಎ) ಇದನ್ನು ಗ್ರಹದ ನಿರ್ಜನ ಪ್ರದೇಶದತ್ತ ತಿರುಗಿಸಲು ಪ್ರಯತ್ನಿಸಿದೆ. ಬ್ರಿಟನ್ನ ಇಂಜಿನಿಯರ್ ಗಳು ನಿರ್ಮಿಸಿದ ಈ ಉಪಗ್ರಹವನ್ನು 2018ರಲ್ಲಿ ಉಡಾವಣೆ ಮಾಡಲಾಗಿದ್ದು 200 ಮೈಲುಗಳಷ್ಟು ಎತ್ತರದಲ್ಲಿ 5 ವರ್ಷ ವಾತಾವರಣದಲ್ಲಿನ ಗಾಳಿಯನ್ನು ಅಳೆಯುವ ಮೂಲಕ ಹವಾಮಾನ ಮುನ್ಸೂಚನೆ ನೀಡುವುದು ಇದರ ಕಾರ್ಯವಾಗಿತ್ತು ಎನ್ನಲಾಗಿದೆ.