ನ್ಯೂಸ್ ನಾಟೌಟ್: ಮಕ್ಕಳ ಬಗ್ಗೆ ಪೋಷಕರು ನೂರಾರು ಕನಸು ಕಟ್ಟಿಕೊಂಡಿರುತ್ತಾರೆ. ಮಕ್ಕಳು ಹಾಗೆ ಆಗಲಿ ಹೀಗೆ ಆಗಲಿ ದೊಡ್ಡ ಅಧಿಕಾರಿಗಳಾಗಿ ಸಮಾಜಕ್ಕೆ ಒಳ್ಳೆಯ ಹೆಸರು ತರಲಿ ಎಂದೆಲ್ಲ ಯೋಚಿಸುತ್ತಾರೆ. ಆದರೆ ಮಕ್ಕಳು ಮಾತ್ರ ಓದಲು ಅಂತ ಬಂದವರು ಕಾಲೇಜಿನಲ್ಲಿ ಮಾಡಬಾರದ್ದನೆಲ್ಲ ಮಾಡಿ ಪೋಷಕರಿಗೆ ಕೆಟ್ಟ ಹೆಸರು ತರುತ್ತಾರೆ. ಜೊತೆಗೆ ತಮ್ಮ ಮರ್ಯಾದೆಯನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಹೌದು ಅಂತಹುದ್ದೇ ಒಂದು ಘಟನೆ ಈಗ ದಾವಣಗೆರೆಯ ಕಾಲೇಜೊಂದರಲ್ಲಿ ನಡೆದಿದ್ದು ಯುವಕ-ಯುವತಿಯ ಸರಸ ಸಲ್ಲಾಪದ ವಿಡಿಯೋ ವೈರಲ್ ಆಗಿದೆ.
ದಾವಣಗೆರೆಯ(Davanagere) ಕಾಲೇಜುವೊಂದರಲ್ಲಿ (College) ಯುವಕ-ಯುವತಿ ಲವ್ವಿ-ಡವ್ವಿಯಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಯಾರ ಭಯವು ಇಲ್ಲದೇ ಕಾಲೇಜಿನ ಕಟ್ಟಡದ ಮೇಲೆ ನಿಂತು ರಾಜರೋಷವಾಗಿ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದಾರೆ.
ಇದೀಗ ಈ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದಾವಣಗೆರೆ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಯುವಕ-ಯುವತಿ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿದ್ದು, ಇದನ್ನು ಪಕ್ಕದ ಬಿಲ್ಡಿಂಗ್ನಲ್ಲಿ ವಿದ್ಯಾರ್ಥಿಗಳು ವಿಡಿಯೋ ಸೆರೆ ಹಿಡಿದಿದ್ದಾರೆ. ಇದೀಗ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.