ನ್ಯೂಸ್ ನಾಟೌಟ್ : ಬಹುಬೇಡಿಕೆಯ ಕೊಡಗು ಸಂಪಾಜೆಯ ನೂತನ ಕಂದಾಯ ಕಛೇರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಅವರು ಹಲವು ಗಣ್ಯರ ಉಪಸ್ಥಿತಿಯೊಂದಿಗೆ ಉದ್ಘಾಟಿಸಿದರು.
ಬಳಿಕ ಮಾತಾಡಿದ ಅವರು ” ಕಂದಾಯ ಇಲಾಖೆಗೆ ಬರುವಂಥ ಜನರ ಸಮಸ್ಯೆಯನ್ನು ಅರಿತು ಅವರಿಗೆ ಸೂಕ್ತವಾಗಿ ಸ್ಪಂದಿಸಬೇಕು.ಜನರಿಗೆ ಕಂದಾಯ ಕಛೇರಿಯ ಅವಶ್ಯಕತೆ ತುಂಬಾನೇ ಇದ್ದು,ಜನ ಇದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ” ಎಂದು ಕರೆ ನೀಡಿದರು.
ಈ ಸಂಧರ್ಭ ಮಡಿಕೇರಿ ಸಹಾಯಕ ಆಯುಕ್ತ ಗಿರೀಶ್ ನಂದನ್ ತಹಶೀಲ್ದಾರ್ ಕಿರಣ್ ಗೌರಯ್ಯ,ಉಪ ತಹಶೀಲ್ದಾರ್ ವೆಂಕಟಾಚಲ, ಪಂಚಾಯತ್ ಅಧ್ಯಕ್ಷ ನಿರ್ಮಲ ಭರತ್,ಉಪಾಧ್ಯಕ್ಷ ಕೆ.ಲ್. ಜಗದೀಶ್,ಅರಣ್ಯ ಸಂರಕ್ಷಣಾಧಿಕಾರಿ ಮಧುಸೂದನ್, ಸಂಪಾಜೆ ಕಂದಾಯ ಪರಿವಿಕ್ಷಕರು ಡಿ.ಜಿ. ವೆಂಕಟೇಶ್,ಗ್ರಾಮ ಲೆಕ್ಕಧಿಕಾರಿ ಪಂಚಾಯತ್ ಅಧಿಕಾರಿ ವೆಂಕಟೇಶ್, ಪಿ.ಎಲ್. ಸುರೇಶ,ಸೂರಾಜ್ ಹೊಸೂರ್, ಮೊಯಿದುಕುಂಜಿ,ಅದಂ,ವಾಸು ಪೂಜಾರಿ,ಎಸ್. ಪಿ.ಹನೀಫ್, ಸುರೇಶ ಪೆರುಮುಂದ, ಕಂದಾಯ ಅಧಿಕಾರಿಗಳು ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.