ನ್ಯೂಸ್ ನಾಟೌಟ್: ಕಳೆದ 9 ವರ್ಷಗಳಿಂದ ಕಡಬದಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಅಭ್ಯರ್ಥಿಗಳಿಗೆ ನೀಡಿ ಉದ್ಯೋಗದ ದಾರಿಯನ್ನು ಕಲ್ಪಿಸುತ್ತಿರುವ ಐಐಸಿಟಿ (IICT) ವಿದ್ಯಾ ಸಂಸ್ಥೆ ಇದೀಗ ಮತ್ತೊಂದು ತರಬೇತಿ ಕೋರ್ಸ್ ಆರಂಭಿಸಿದೆ. ಕಂಪ್ಯೂಟರ್ ತರಗತಿ, ಟುಟೋರಿಯಲ್, ಟ್ಯೂಷನ್ ಕ್ಲಾಸ್, ನವೋದಯ ತರಬೇತಿ, ಅಬಾಕಸ್ ಶಿಕ್ಷಣ ನೀಡುತ್ತಿದ್ದ ಸಂಸ್ಥೆ ಈಗ ಬಹಳಷ್ಟು ಬೇಡಿಕೆಯನ್ನು ಹೊಂದಿರುವ ನರ್ಸರಿ( ಮೊಂಟೆಸ್ಸರಿ) ಶಿಕ್ಷಕಿ ಕೋರ್ಸ್ ಅನ್ನು ಆರಂಭಿಸುತ್ತಿದೆ. ಈ ಮೂಲಕ ಕಡಬ ಸೇರಿದಂತೆ ವಿವಿಧ ತಾಲೂಕಿನ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಹೊಸ ಕೋರ್ಸ್ ಗೆ ಜು.22ರಂದು ಕೊಕ್ಕಡ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ವಿಶ್ವನಾಥ ರೈ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಶಿಕ್ಷಣ ಕೊಡುವ ದೃಷ್ಟಿಯಲ್ಲಿ ಸರ್ಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ದೊಡ್ಡ ಕೊಡುಗೆ ನೀಡುತ್ತಿವೆ. ಅದೇ ರೀತಿ ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ಕೋರ್ಸ್ ಅತ್ಯಂತ ಬೇಡಿಕೆಯಲ್ಲಿರುವ ತರಬೇತಿಯಾ, ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂಥ ತರಬೇತಿಯನ್ನು ಈ ಶಿಕ್ಷಣದ ಸಂಸ್ಥೆಯಲ್ಲಿ ನೀಡುತ್ತಿರುವುದು ಹೆಮ್ಮೆಯಾಗಿದೆ, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು. ಪತ್ರಕರ್ತ ಬಾಲಕೃಷ್ಣ ಕೊಯಿಲ, ನೆಲ್ಯಾಡಿ ಸಂತ ಚಾರ್ಜ್ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ವಿಶ್ವನಾಥ ಶೆಟ್ಟಿ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶ್ರೀಮತಿ ಗಂಗಾ ಪ್ರಾರ್ಥಿಸಿದರು, ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಸಿ ಎಚ್ ಸ್ವಾಗತಿಸಿದರು. ಕಡಬ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ನಾಗರಾಜ್, ಪತ್ರಕರ್ತರಾದ ವಿಜಯ್ ಕುಮಾರ್, ದಿವಾಕರ, ತಸ್ಲೀಮ್, ಕಟ್ಟಡದ ಮಾಲೀಕರಾದ ಜೋಯಲ್, ಜೈ ಭಗವಾನ್ ಸ್ಟೋರ್ ಮಾಲೀಕ ರಾಜ್ ಕುಮಾರ್, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ತರಬೇತಿ ಪಡೆಯಲು ಬಯಸುವ ಆಸಕ್ತರು ಮೊಬೈಲ್ ಸಂಖ್ಯೆ 9448409912 ಅಥವಾ 8496085912 ಸಂಪರ್ಕಿಸಬಹುದು.