ನ್ಯೂಸ್ ನಾಟೌಟ್: ಮಡಿಕೇರಿ-ಅಭಿಫಾಲ್ಸ್ಗೆ ತೆರಳುವ ದಾರಿ ಮಧ್ಯೆ ಭಾರಿ ಗಾತ್ರದ ಮರವೊಂದು ಬಿದ್ದು ಸಂಚಾರ ಅಸ್ತವ್ಯಸ್ತಗೊಂದ ಘಟನೆ ಶನಿವಾರ ನಡೆದಿದೆ.
ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದುದರಿಂದ ವಿದ್ಯುತ್ ವೆತ್ಯಯ ಉಂಟಾಗಿದೆ. ಸ್ಥಳಕ್ಕೆ ಸೆಸ್ಕ್ ಸಿಬ್ಬಂದಿ ಮರ ತೆರವುಗೊಳಿಸುತ್ತಿದ್ದಾರೆ. ಇದರಿಂದ ಸುಮಾರು 1 ಕಿ.ಮೀ. ತನಕ ಟ್ರಾಫಿಕ್ ಜಾಮ್ ಉಂಟಾಯಿತು.
ಕೆ.ನಿಡುಗಣೆ, ಹೆಬ್ಬಟ್ಟಗೇರಿ, ನಂದಿಮೊಟ್ಟೆ ಸುತ್ತಮುತ್ತಲ ಗ್ರಾಮಗಳ ಜನರು, ವಿದ್ಯಾರ್ಥಿಗಳು ಮಡಿಕೇರಿಗೆ ಬರಲು ಸಮಸ್ಯೆ ಎದುರಾಯಿತು. ಬಹುಪಾಲು ವಿದ್ಯಾರ್ಥಿಗಳು ವಾಪಸ್ ತೆರಳಿದರು. ಮಡಿಕೇರಿ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ವೇಗದಲ್ಲಿ ಗಾಳಿ ಬೀಸುತ್ತಿದೆ. ಈ ಗಾಳಿಯ ಪರಿಣಾಮ ಮರಗಳು ಧರೆಗುರುಳುತ್ತಿವೆ. ಇದರಿಂದ ನಗರದಲ್ಲಿ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.