ನ್ಯೂಸ್ ನಾಟೌಟ್ : ಚಿಕ್ಕಮಗಳೂರಿನಲ್ಲಿ ಮಳೆಯಬ್ಬರ ಮುಂದುವರಿದಿದೆ.ಹೀಗಾಗಿ ಕಾಫಿನಾಡಿನ ಜಲಪಾತಗಳಿಗೆ ಜೀವಕಳೆ ಬಂದಿದೆ.ಇಲ್ಲಿನ ಕಲ್ಲತ್ತಿಗಿರಿ ಜಲಪಾತದ ಸಂದರ್ಯಕ್ಕೆ ಮನಸೋಲದವರೇ ಇಲ್ಲ.
ಮೈದುಂಬಿ ಹರಿಯುತ್ತಿರುವ ತರಿಕೆರೆ ತಾಲೂಕಿನ ಕಲ್ಲತ್ತಿಗರಿ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರಿತಿದೆ.ಮಳೆಗಾಲದಲ್ಲಿಅಬ್ಬರಿಸಿ ಭೋರ್ಗೆರೆವ ಜಲಪಾತದ ರಮಣೀಯ ದೃಶ್ಯ ನೋಡುಗರ ಮನಸ್ಸಿಗೆ ಹಬ್ಬವೆಂಬಂತಿದೆ. ಪ್ರಕೃತಿ ಮಡಿಲಲ್ಲಿಅವಿತಿರುವ ಜಲಪಾತವನ್ನು ನೋಡಲು ಇಲ್ಲಿಗೆ ದೂರದ ಹಲವು ಸುತ್ತಮುತ್ತಲ ಊರಿನ ಜನ ದೌಡಾಯಿಸುತ್ತಾರೆ.
ಕಳೆದ 15 ದಿನಗಳ ಹಿಂದೆ ಜಲಪಾತದಲ್ಲಿ ನೀರಿನಲ್ಲದೇ ಬತ್ತಿ ಹೋಗಿತ್ತು.ಹೀಗಾಗಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿರುವ ಈ ಜಲಪಾತ ಕಪ್ಪನೆಯ ಹಾಸುಗಲ್ಲಿನ ಬೃಹತ್ ಬಂಡೆಯ ಮೇಲೆ ಜಿಗಿಜಿಗಿಯುತ್ತ ಇಳಿವ ಹಾಲು ಬಿಳುಪಿನ ಜಲಧಾರೆಯನ್ನು ನೋಡಲು ಎರಡು ಕಣ್ಣುಗಳೇ ಸಾಲದು ಎಂಬಂತಿದೆ.