ನ್ಯೂಸ್ ನಾಟೌಟ್ : ಹಿಂದಿನ ಕಾಲದಲ್ಲಿ ಆ ಅಂಚೆಯೇ ಜನರ ಸಂಪರ್ಕದ ಸಂಪನ್ಮೂಲವಾಗಿತ್ತು. ಏನೇ ಆದರೂ ಅಂಚೆ ಮೂಲಕವೇ ಮಾಹಿತಿಗಳು ರವಾನೆಯಾಗುತ್ತಿದ್ದವು. ಕೆಲವೊಮ್ಮೆ ಅಂಚೆ ಸರಿಯಾದ ಸಮಯಕ್ಕೆ ತಲುಪಿತ್ತಾದರೂ ಅವರು ಆ ಕಾರ್ಯಕ್ರಮಕ್ಕೆ ಬರಲು ಸಮಯ ಸಾಲದೆ ಇರುವ ಘಟನೆಗಳು ನಡೆಯುತ್ತಿದ್ದವು. ಎಷ್ಟೋ ಬಾರಿ ತಡವಾಗಿ ತಲುಪಿ ಉಪಯೋಗವೇ ಇಲ್ಲದಂತಾಗುತ್ತಿತ್ತು.
ಅದೇ ರೀತಿ ಅಮೆರಿಕದಲ್ಲಿ 1969ರಲ್ಲಿ ಮಾಡಲಾಗಿದ್ದ ಪೋಸ್ಟ್ ಒಂದು ಈ ವರ್ಷ ಅಂದರೆ, 2023ರಲ್ಲಿ ವಿಳಾಸಕ್ಕೆ ವಿಳಾಸಕ್ಕೆ ತಲುಪಿದೆ. ಬರೋಬ್ಬರಿ 54 ವರ್ಷಗಳ ನಂತರ ಪೋಸ್ಟ್ ಒಂದು ಅದರ ವಿಳಾಸಕ್ಕೆ ತಲುಪಿದೆ. ಆದರೆ ಈಗ ಆ ವಿಳಾಸದಲ್ಲಿ ಬೇರೆಯ ಕುಟುಂಬವೇ ಇದೆ. ಗ್ಯಾಗ್ನೋನ್ಸ್ ಎಂಬ ಹೆಸರಿಗೆ ಪೋಸ್ಟ್ ಬಂದಿದ್ದು ಅದು ಯಾರು ಎನ್ನುವುದು ಕೂಡ ಅಂಚೆ ಪಡೆದವರಿಗೆ ತಿಳಿದಿಲ್ಲವಂತೆ.
ಈ ವಿಚಾರವಾಗಿ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಿಮಗ್ಯಾರಿಗಾದರೂ ಈ ಗ್ಯಾಗ್ನೋನ್ಸ್ ಯಾರು ಎಂದು ತಿಳಿದಿದ್ದರೆ ತಿಳಿಸಿ. ವಿಚಿತ್ರವೆಂದರೆ ಇದರಲ್ಲಿ ವಿಳಾಸದಲ್ಲಿ ಗ್ಯಾಗ್ನೋನ್ಸ್ ಅಥವಾ ಆ ವಿಳಾಸದಲ್ಲಿ ಯಾರಿದ್ದಾರೋ ಅವರಿಗೆ ಎಂದು ಬರೆಯಲಾಗಿದೆ” ಎಂದು ಪೋಸ್ಟ್ ಪಡೆದ ಜೆಸ್ಸಿಕಾ ಮಾಹಿತಿ ನೀಡಿದ್ದಾರೆ. ಹಾಗೆಯೇ ಅವರ ಅಕ್ಕ ಪಕ್ಕದ ಮನೆಯವರ ಮಾಹಿತಿ ಪ್ರಕಾರ ಗ್ಯಾಗ್ನೋನ್ಸ್ ಅವರು ಜೆಸ್ಸಿಕಾ ಅವರ ಮನೆಯೆ ಮಾಜಿ ಮಾಲೀಕರಾಗಿದ್ದರಂತೆ. ಅವರು ಆ ಮನೆಯಲ್ಲಿ 90ರ ದಶಕದ ತನಕ ವಾಸವಿದ್ದರು ಎನ್ನಲಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪೋಸ್ಟ್ ಅನ್ನು ಜೆಸ್ಸಿಕಾ ತಮ್ಮ ಫೇಸ್ಬುಕ್ನಲ್ಲಿ ಜುಲೈ 18ರಂದು ಹಂಚಿಕೊಂಡಿದ್ದಾರೆ ಆದರೆ, ಈಗ ಅದು ವೈರಲ್ ಆಗಿದೆ.