ನ್ಯೂಸ್ ನಾಟೌಟ್: ಭಾರತ ಟೆಸ್ಟ್ ತಂಡದ ನಾಯಕ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ (Rohit sharma) ವಿಂಡೀಸ್ (IND vs WI) ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಹಲವು ದಾಖಲೆಗಳ ನಿರ್ಮಿಸಿ ಇತಿಹಾಸ ಬರೆದಿದ್ದಾರೆ.
ರೋಹಿತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ(World Test Championships) 2 ಸಾವಿರ ರನ್ ಪೂರ್ತಿಗೊಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಜತೆಗೆ ಆರಂಭಿಕನಾಗಿ ಭಾರತ ಪರ 2 ಸಾವಿರ ರನ್ ಬಾರಿಸಿದ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ.
ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ಪರ
ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಜೈಸ್ವಾಲ್ ಮತ್ತು ರೋಹಿತ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 139 ರನ್ ಕೊಡುಗೆ ನೀಡಿದರು. ಉಭಯ ಆಟಗಾರರ ಮೊದಲ ಪಂದ್ಯದ ಬ್ಯಾಟಿಂಗ್ ಪ್ರದರ್ಶನ ಈ ಪಂದ್ಯದಲ್ಲಿಯೂ ಕಂಡುಬಂದಿತು. ಆ ಬಳಿಕ ವಿರಾಟ್ ಕೂಡ ಉತ್ತಮ ಬ್ಯಾಟಿಂಗ್ ನಡೆಸಿ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು.
2019ರಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಆರಂಭಿಕನಾಗಿ ಬಡ್ತಿ ಪಡೆದೆ ರೋಹಿತ್ ಶರ್ಮಾ ಇದುವರೆಗೆ ಆರಂಭಿನಾಗಿ 7 ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ 2000 ರನ್ಗಳನ್ನು ಪೂರ್ಣಗೊಳಿಸಿದ್ದಾರೆ.
ಜೈಸ್ವಾಲ್ ಮತ್ತು ರೋಹಿತ್ ಮೊದಲ ವಿಕೆಟ್ಗೆ 100ಕ್ಕೂ ಹೆಚ್ಚಿನ ರನ್ಗಳ ಜತೆಯಾಟವಾಡುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಸತತ ಎರಡನೇ ಬಾರಿ ಮೊದಲನೇ ವಿಕೆಟ್ಗೆ 100ಕ್ಕೂ ಹೆಚ್ಚಿನ ರನ್ಗಳ ಜತೆಯಾಟವಾಡಿದ ಭಾರತದ ಆರನೇ ಜೋಡಿ ಎನಿಸಿಕೊಂಡರು. ರೋಹಿತ್ ಮತ್ತು ಜೈಸ್ವಾಲ್ ಮೊದಲ ಪಂದ್ಯದಲ್ಲಿ ಬರೋಬ್ಬರಿ 229 ರನ್ ಜತೆಯಾಟ ನಡೆಸಿದ್ದರು. ದ್ವಿತೀಯ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ 143 ಎಸೆತಗಳಿಂದ 80 ರನ್ ಬಾರಿಸಿದರು. ಈ ಇನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಿತು.