ನ್ಯೂಸ್ ನಾಟೌಟ್: ನೀರು ತುಂಬಿದ್ದ ಬಕೆಟ್ಗೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ಕಾವೂರು ಮಸೀದಿ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಫಿರೋಜ್ ಅನ್ಸಾರಿ ಅವರ ಪುತ್ರಿ ಆಯಿಷಾ (1.8 ವರ್ಷ) ಮೃತಪಟ್ಟ ದುರ್ದೈವಿ.
ಜಾರ್ಖಂಡ್ನ ವಲಸೆ ಕಾರ್ಮಿಕರಾಗಿರುವ ಫಿರೋಜ್ ಅನ್ಸಾರಿ ದಂಪತಿ ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಸಂಜೆ ಮಗು ಆಯಿಷಾ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನ ಬಕೆಟ್ಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.