ಮುಂಬೈ: ಮನೆಮನೆಗೆ ನುಗ್ಗಿ ಹೊಡಿತೀವಿ ಎಂದು ಹೇಳುವ ಮೂಲಕ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ತುಮಕೂರಿನಲ್ಲಿ ಹಲ್ಲೆಗೊಳಗಾದ ಬಜರಂಗದಳದ ಮಂಜು ಬಾರ್ಗವನನ್ನು ಮುತಾಲಿಕ್ ಭೇಟಿಯಾದರು. ಬಳಿಕ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ವಿಚಾರಕ್ಕೆ ಬಂದರೆ ತುಮಕೂರು ಚಲೋ ಮಾಡುತ್ತೇವೆ. ಮನೆಗೆ ನುಗ್ಗಿ ಹೊಡಿತೀವಿ. ಐದು ಲಕ್ಷ ಕಾರ್ಯಕರ್ತರು ತುಮಕೂರಿಗೆ ಬರಬಹುದು ಎಂದು ಹೇಳಿದ್ದಾರೆ. ಮಂಜು ಮೇಲೆ ಏಕೆ ಹಲ್ಲೆ ಮಾಡಲಾಗಿದೆ ಎಂದು ನನಗೆ ತಿಳಿದಿದೆ. ಮತಾಂತರ, ಲವ್ ಜಿಹಾದ್ ವಿರುದ್ಧ ಮಂಜು ಧ್ವನಿ ಎತ್ತಿದ್ದ. ಇದರಿಂದ ದಾಳಿ ನಡೆದಿದೆ ಎಂದು ಮುತಾಲಿಕ್ ಹೇಳಿದ್ದಾರೆ. ಈಗ ತುಮಕೂರು ಮಾತ್ರ ಬಂದ್ ಮುಂದೆ ಹೀಗೆ ಅಲ್ಲ. ಇನ್ನು ನಿಮ್ಮ ಆಟ ನಡೆಯಲ್ಲ. ಕಸಾಯಿಖಾನೆ ನೀವು ನಿಲ್ಲಿಸಿಲ್ಲ ಅಂದ್ರೆ ನಾವು ನಿಲ್ಲಿಸ್ತೇವೆ ಎಂದು ಮುತಾಲಿಕ್ ಕಿಡಿ ಕಾರಿದ್ದಾರೆ.