ನ್ಯೂಸ್ ನಾಟೌಟ್ : NMC (ನೆಹರೂ ಮೆಮೋರಿಯಲ್ ಕಾಲೇಜು) ಇಲ್ಲಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಮತಾ ಪುರುಷೋತ್ತಮ ಇವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಈ ಪದವಿ ನೀಡಿ ಗೌರವಿಸಿದೆ.
ಇವರು ಡಾ. ಶಂಕರ ನಾರಣಪ್ಪ, ಅಸೋಸಿಯೇಟ್ ಪ್ರೊಫೆಸರ್, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮೈಸೂರು ಇವರ ಮಾರ್ಗದರ್ಶನದಲ್ಲಿ “Role of Women members in Mangalore corporation -A Study (2010-15)” ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದರು.ಇವರು ಬರೆದಿರುವ ಹಲವಾರು ಪ್ರಬಂಧಗಳು ರಾಷ್ಟ್ರೀಯ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.
ಮಮತಾ ಅವರು ಕಳೆದ ಇಪ್ಪತ್ತು ವರ್ಷಗಳಿಂದ ನೆಹರೂ ಮೆಮೋರಿಯಲ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು,ಸಾಹಿತ್ಯದಲ್ಲಿಯೂ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಪುರುಷೋತ್ತಮ ಪಾರೆಪ್ಪಾಡಿಯವರ ಧರ್ಮಪತ್ನಿಯಾಗಿದ್ದು, ವಿಟ್ಲ ಕಾಯರ್ ಮಾರ್ ಧನಂಜಯ ಮತ್ತು ಶಾರದಾ ದಂಪತಿ ಪುತ್ರಿ ಮತ್ತು ಪಾರೆಪ್ಪಾಡಿಯ ದಿವಂಗತ ಚಿನ್ನಪ್ಪ ಮಾಸ್ತರ್ ಮತ್ತು ಯಮುನಾ ದಂಪತಿ ಸೊಸೆ.
ಮಮತಾ ಅವರನ್ನು ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಹಾಗೂ ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಶೈಕ್ಷಣಿಕ ಸಲಹೆಗಾರರು ಮತ್ತು ಭೋದಕ ಭೋದಕೇತರ ವೃಂದದವರು ಅಭಿನಂದಿಸಿದರು.