ನ್ಯೂಸ್ ನಾಟೌಟ್: ತಾನು ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನಿಂದಲೇ ಅಮಾನವೀಯವಾಗಿ ಕೊಲೆಯಾದ ಉತ್ತರ ಭಾರತ ಮೂಲದ ಕಾರ್ಮಿಕ ಗಜ್ಞಾನ್ ಜಗು ನ ಅಂತ್ಯಸಂಸ್ಕಾರವನ್ನು ಸೋಮವಾರ ಮಂಗಳೂರಿನ ನಂದಿಗುಡ್ಡೆಯ ಸ್ಮಶಾನದಲ್ಲಿ ಸ್ಥಳೀಯರು ನೆರವೇರಿಸಿದರು.
ಕೊಲೆಯಾದ ಕಾರ್ಮಿಕ ಗಜ್ಞಾನ್ ಕುಟುಂಬಸ್ಥರ ಪತ್ತೆ ಕಾರ್ಯ ಸಾಧ್ಯವಾಗದ ಕಾರಣ ಈ ಪ್ರಕರಣದಲ್ಲಿ ದೂರುದಾರರು ಹಾಗೂ ಪ್ರಮುಖ ಸಾಕ್ಷಿಯಾಗಿರುವ ಮಹಮ್ಮದ್ ಅಝರ್ ನೇತೃತ್ವದಲ್ಲಿ ಪಾಂಡೇಶ್ವರ ಪೊಲೀಸರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಕಾರ್ಯ ನೆರವೇರಿತು.
ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ಇರುವ ತೌಸಿಫ್ ಹುಸೈನ್ನ ಜನರಲ್ ಸ್ಟೋರ್ನಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕ ಗಜ್ಞಾನ್ ಕೆಲಸಕ್ಕೆ ಸೇರಿದ್ದ. ಆದರೆ ಕಳೆದ ಶನಿವಾರ ಬೆಳಗ್ಗೆ (ಜು.8) ಕ್ಷುಲ್ಲಕ ಕಾರಣಕ್ಕೆ ಗಜ್ಞಾನ್ನನ್ನು ಮಾಲೀಕ ತೌಸಿಫ್ ಹುಸೈನ್ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವ ನಾಟಕವಾಡಿದ್ದ. ಮಧ್ಯಾಹ್ನ ಸುಮಾರು 1.30ಕ್ಕೆ ಈ ವಿಚಾರ ಹೊರಬೀಳುತ್ತಿದ್ದಂತೆ ಗಾಯಗೊಂಡ ಗಜ್ಞಾನ್ನನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಅನಂತರ ಮಂಗಳೂರು ದಕ್ಷಿಣ ಪೊಲೀಸರು ತನಿಖೆ ನಡೆಸಿದಾಗ ಸಾಕ್ಷ್ಯಗಳು ಲಭ್ಯವಾಗಿದ್ದು, ಇದೊಂದು ಕೊಲೆ ಪ್ರಕರಣವೆಂದು ದೃಢಪಟ್ಟಿದ್ದು ಆರೋಪಿ ತೌಸಿಫ್ ಹುಸೈನ್ನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.