ನ್ಯೂಸ್ ನಾಟೌಟ್ : ಕೊರೊನಾ ಹೆಮ್ಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು.ಕೊರೊನಾ ತಂದ ಆಪತ್ತು ಅಷ್ಟಿಷ್ಟಲ್ಲ.ಆದರೆ ಈ ಕೊರೊನಾ ಲಾಕ್ ಡೌನ್ ಸಮಯ ಹಲವರ ಬದುಕನ್ನು ಕೂಡ ಬದಲಿದೆ.ಈ ಮಧ್ಯೆ ಅನೇಕರು ಯೂಟ್ಯೂಬ್ ಚಾನೆಲ್ ಕ್ರಿಯೆಟ್ ಮಾಡಿ ವೈರಲ್ ಸ್ಟಾರ್ ಗಳಾಗಿದ್ದಾರೆ.ಅವರಲ್ಲಿರು ಪ್ರತಿಭೆ ಕೂಡ ಹೊರ ಬಂದಿದೆ.ಇನ್ನೂ ಕೆಲವರು ವರ್ಕ್ ಫ್ರಮ್ ಹೋಮ್ ಮೂಲಕ ಬೇರೆ ಬೇರೆ ಕಂಪನಿಗಳಿಗೆ ಕೆಲಸ ಮಾಡಿದವರು ಇದ್ದಾರೆ.ಇಲ್ಲೊಬ್ಬ ಹುಡುಗ ಆಯ್ಕೆ ಮಾಡಿಕೊಂಡಿದ್ದು,ಚಾಕೊಲೇಟ್ ತಯಾರಿಸುವ ಹವ್ಯಾಸವನ್ನು.ಇದೀಗ 19 ವರ್ಷದ ಯುವಕ ಕೋಟಿ ರೂ. ಮೌಲ್ಯದ ಬ್ಯುಸಿನೆಸ್ ಹೊಂದಿದ್ದಾನೆ..!
ಕೊರೊನಾ ಬಿಕ್ಕಟ್ಟಿನಲ್ಲಿ ನಿತ್ಯ ಕೆಲಸದ ಒತ್ತಡದ ಮಧ್ಯೆ ಹವ್ಯಾಸವನ್ನೇ ಮರೆತವರು ಮತ್ತೆ ಹವ್ಯಾಸಗಳತ್ತ ಮೊರೆ ಹೋಗಿ ಎಷ್ಟೋ ಮಂದಿ ಬದುಕು ಕಟ್ಟಿ ಕೊಂಡರು.ಹೀಗೆ, ಕೊರೊನಾ ಸಮಯದ ವೇಳೆ ಚಾಕೊಲೇಟ್ ತಯಾರಿಸುವ ಮೂಲಕ ತನ್ನ ಹವ್ಯಾಸಕ್ಕೆ ಒಲವು ತೋರಿ ರಾಜಸ್ಥಾನದ ಉದಯಪುರದ 19 ವರ್ಷದ ಯುವಕ ಕೋಟಿ ಮೌಲ್ಯದ ಒಡೆಯನಾಗಿದ್ದಾನೆ. ಈತನ ಹೆಸರು ದಿಗ್ವಿಜಯ್ ಸಿಂಗ್. ಮನೆಯಲ್ಲಿಯೇ ಸುಮ್ಮನೆ ಕುಳಿತಿದ್ದ ಈತನಿಗೆ ಕೆಲ ದಿನಗಳ ನಂತರ ಬೋರ್ ಆಗೋದಕ್ಕೆ ಶುರುವಾಯಿತು.ಹೀಗೆ ಕುಳಿತವನಿಗೆ ನಾನೇಕೆ ಖಾಲಿಯಾಗಿ ಕೂತಿರಬೇಕು.ಏನಾದರೂ ಕ್ರಿಯೆಟಿವ್ ಆಗಿ ಮಾಡಬೇಕಲ್ಲ ಎಂದು ಯೋಚಿಸೋದಕ್ಕೆ ಆರಂಭ ಮಾಡಿದ.ಯೂಟ್ಯೂಬ್ ವೀಕ್ಷಿಸೋದಕ್ಕೆ ಆರಂಭ ಮಾಡಿದ.ಕೊನೆಗೂ ಇವನಿಗೆ ಒಂದು ಉಪಾಯ ಹೊಳೆಯುತ್ತೆ.
ಯೂಟ್ಯೂಬ್ ನೋಡುತ್ತಲೇ ಚಾಕೊಲೇಟ್ ತಯಾರಿಸಲು ಆರಂಭ ಮಾಡಿದ.ಜನರಿಗೆ ಇಷ್ಟವಾಗುವ ಮೊದಲು ತನ್ನ ಮನೆಯವರಿಗೆ ಟೇಸ್ಟ್ ಮಾಡಲು ಹೇಳಿದ.ಅವರೊಂದಿಗೆ ಅಭಿಪ್ರಾಯ ಕೇಳಿದ. ಆದರೆ ಈತ ತಯಾರಿಸಿದ ಚಾಕೊಲೇಟ್ ಮನೆಯವರಿಗೆ ಇಷ್ಟವಾದವು.ಅದಾದ ಬಳಿಕ ಅದನ್ನು ಮಾರಾಟ ಮಾಡೋದಕ್ಕೆ ಶುರು ಮಾಡಿದ.ಇದೀಗ ದಿಗ್ವಿಜಯ್ ಸಿಂಗ್ ಸರಾಮ್ ಎಂಬ ಯುವಕ ಚಾಕೊಲೇಟ್ ಬ್ರ್ಯಾಂಡ್ ಓನರ್ ಆಗಿದ್ದಾನೆ ಅನ್ನೋದನ್ನು ನಂಬೋದಕ್ಕೆ ಅಸಾಧ್ಯವಾಗುತ್ತೆ.
ಈತ ಸಿದ್ಧಪಡಿಸಿದ ಚಾಕಲೇಟ್ ಗೆ ಡಿಮ್ಯಾಂಡ್ ಹೆಚ್ಚಾಗೋದಕ್ಕೆ ಶುರುವಾಯಿತು.2021ರಲ್ಲಿ ದಿಗ್ವಿಜಯ್ ಸಿಂಗ್ ಚಾಕೊಲೇಟ್ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಯಿತು.ಬೇರೆ ಬೇರೆ ಕಡೆಯಿಂದ ಆರ್ಡರ್ ಬರೋದಕ್ಕೆ ಆರಂಭವಾಯಿತು. ಇದರಿಂದ ಪ್ರೇರೆಪಿತಗೊಂಡ ಈತ ಹೆಚ್ಚು ಉತ್ಪಾದನೆ ಶುರು ಮಾಡಿದ.ಇದೀಗ ದೆಹಲಿ, ಬೆಂಗಳೂರು, ಉದಯಪುರ ಹಾಗೂ ಜೈಪುರದಲ್ಲಿ ಮಳಿಗೆಗಳನ್ನು ಹೊಂದಿದ್ದಾನೆ. ಒಂದು ಕೋಟಿ ರೂ. ಮೌಲ್ಯದ ಬ್ಯುಸಿನೆಸ್ ಹೊಂದಿದ್ದಾನೆ.ಇದುವರೆಗೆ ಎರಡು ಟನ್ ಚಾಕೊಲೇಟ್ಗಳನ್ನು ಈತ ದೇಶಾದ್ಯಂತ ಮಾರಾಟ ಮಾಡಿದ್ದಾನೆ ಅನ್ನೋದು ಅಚ್ಚರಿಯ ಸಂಗತಿ.
ತಂತ್ರಜ್ಞಾನ ಎಷ್ಟೇ ಮುಂದುವರಿದ್ರೂ , ಆಧುನಿಕತೆಯತ್ತ ಮುಖ ಮಾಡಿದ್ರೂ ದೇಶೀಯ ಉತ್ಪನ್ನಗಳಿಗೆ ಜನ ಮೊರೆ ಹೋಗೋದೇ ಹೆಚ್ಚು.ಇದನ್ನ ಚೆನ್ನಾಗಿ ಅರಿತುಕೊಂಡ ಈ ಯುವಕ ದೇಶೀಯ ಉತ್ಪನ್ನಗಳನ್ನು ಬಳಸಿಕೊಂಡು ಚಾಕೊಲೇಟ್ಗಳನ್ನು ತಯಾರಿಸಲು ಆರಂಭಿಸಿದ.ಇದೇ ಅವನ ಯಶಸ್ಸಿನ ಗುಟ್ಟಾಗಿದೆ. ಜಾಮೂನು, ಕೇಸರಿ, ಹಣ್ಣುಗಳನ್ನು ಬಳಸಿ ಮಾಡಿದ ವಿಶಿಷ್ಟವಾದ ಚಾಕೊಲೇಟ್ಗಳು ಜನರಿಗೆ ಇಷ್ಟವಾಗುವುದಕ್ಕೆ ಆರಂಭವಾಯಿತು. ಬದಲಿಗೆ ಅದು ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂಬ ಭಾವನೆಯೂ ಜನರಲ್ಲಿದೆ. ಹೀಗಾಗಿ ಜನ ಈ ಚಾಕಲೇಟನ್ನು ಆಯ್ಕೆ ಮಾಡೋದಕ್ಕೆ ಶುರು ಮಾಡಿದರು.
ಸಾಧಿಸಬೇಕೆನ್ನುವ ಛಲವಿದ್ರೆ ,ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಹಾಗೂ ಆಸಕ್ತಿಯಿಂದ ಕೆಲಸ ಮಾಡಿದ್ರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಯುವಕನೇ ನಿದರ್ಶನ.