ಸುಳ್ಯ: ಉಬರಡ್ಕ ಗ್ರಾಮದ ಕುತ್ತಮೊಟ್ಟೆ ನಿವಾಸಿ ರಾಮ (63 ವರ್ಷ) ಹೊಳೆಯಲ್ಲಿ ಸ್ಥಾನಕ್ಕಿಳಿದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅ.24 ರಂದು ನಡೆದಿದೆ. ಉಬರಡ್ಕ ಕುತ್ತಮೊಟ್ಟೆ ನಿವಾಸಿ ರಾಮ ಮನೆಯ ಪಕ್ಕದಲ್ಲಿರುವ ಹೊಳೆಗೆ ನಿನ್ನೆ ಸಂಜೆ ಸ್ಥಾನಕ್ಕೆಂದು ತೆರಳಿದ್ದರು ಅವರು ವಾಪಸು ಬಾರದೆ ಇದ್ದಾಗ ಮನೆಯವರು ಅವರನ್ನು ಹುಡುಕಾಡಿದಾಗ ಹೊಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು. ಕೊಡಿಯಾಲಬೈಲ್ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತರು ಪತ್ನಿ ಕಮಲ ರನ್ನು ಅಗಲಿದ್ದಾರೆ.
- +91 73497 60202
- [email protected]
- December 5, 2024 7:03 AM