ನ್ಯೂಸ್ ನಾಟೌಟ್: ಕೆಲವರಿಗೆ ಶ್ರೀಮಂತಿಕೆ ಅನ್ನುವುದು ದೊಡ್ಡಸ್ಥಿಕೆಯ ವಿಚಾರ. ನಾನೇ ದೊಡ್ಡವನು ನಾನು ಹೇಳಿದಂತೇ ಕೇಳಬೇಕು ಅನ್ನುವ ಅಹಂ ಭಾವನೆ ಇರುತ್ತದೆ. ಆದರೆ ಕೆಲವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದರೂ ಎಳ್ಳಷ್ಟು ಅಹಂ ಇರುವುದಿಲ್ಲ. ಅಂತಹವರ ಸಾಲಿಗೆ ಇದೀಗ ಬಾಲಿವುಡ್ ನ ಖ್ಯಾತ ನಟಿ ಆಲಿಯಾ ಭಟ್ ಕೂಡ ಸೇರಿಕೊಂಡಿದ್ದಾರೆ.
ಸೆಲೆಬ್ರಿಟಿಗಳಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕುವುದು ತೀರ ಕಡಿಮೆ. ಅದರಲ್ಲೂ ಒಂದು ಬಾರಿ ಸೆಲೆಬ್ರೆಟಿ ಪಟ್ಟ ಸಿಕ್ಕರಂತೂ ಮತ್ತೆ ಹಿಂತಿರುಗಿ ನೋಡುವುದೇ ಇಲ್ಲ. ಬದುಕಿನಲ್ಲಿ ಶ್ರೀಮಂತಿಕೆಯೇ ಅವರ ಸುತ್ತ ಆವರಿಸಿಕೊಂಡು ಬಿಡುತ್ತದೆ. ಈ ನಡುವೆ ಮಾನವೀಯ ವರ್ತನೆ ತೀರ ಕಡಿಮೆ, ಹಲವು ಸಲ ಉದ್ದಟತನದ ವರ್ತನೆಯನ್ನೇ ನಾವು ಕಂಡಿದ್ದೇವೆ. ಆದರೆ ಸಿಗಬೇಕಾಗಿರುವ ಎಲ್ಲ ಶ್ರೀಮಂತಿಕೆಯೂ ಸಿಕ್ಕಿದ ಆ ನಂತರವೂ ಮಾನವೀಯತೆ ಕಾಳಜಿಯನ್ನು ತೋರಿಸುವುದು ಅಪರೂಪದಲ್ಲಿ ಅಪರೂಪ. ಅದು ಕೆಲವೊಮ್ಮೆ ಎಂಥವರನ್ನೂ ಮತ್ತೆ ಮತ್ತೆ ಹೀರೋ ಅಥವಾ ಹೀರೋಯಿನ್ ಆಗಿ ಫ್ರೂ ಮಾಡುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ವಿಡಿಯೋವೊಂದು ವೈರಲ್ ಆಗಿದೆ.
ಪಾದರಕ್ಷೆಯನ್ನು ಕಳೆದುಕೊಂಡಿದ್ದ ಫೋಟೋಗ್ರಾಫರ್ಗೆ ಆಲಿಯಾ ಭಟ್ ಚಪ್ಪಲಿಯನ್ನು ಹುಡುಕಿಕೊಟ್ಟಿದ್ದಾರೆ. ಮಾತ್ರವಲ್ಲ, ತನ್ನ ಕೈಯಾರೆ ಚಪ್ಪಲಿಯನ್ನು ತೆಗೆದುಕೊಂಡು ಆತನಿಗೆ ನೀಡಿದ್ದಾರೆ. ಅಂದಹಾಗೆಯೇ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲಿ ಇದ್ದವರು ಆಲಿಯಾ ಮಾನವೀಯ ವರ್ತನೆಗೆ ಫಿದಾ ಆಗಿದ್ದಾರೆ.
ಆಲಿಯಾ ಭಟ್ ತನ್ನ ತಾಯಿ ಸೋನಿ ರಜ್ಡಾನ್ ಮತ್ತು ಸಹೋದರಿ ಶಾಹೀನ್ ಭಟ್ ಜೊತೆಗೆ ಮುಂಬೈ ಫ್ಯಾನ್ಸಿ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಆಲಿಯಾ ಭಟ್ ಬರುವುದನ್ನು ಕಾದುಕೊಂಡಿದ್ದ ಫೋಟೋಗ್ರಾಫರ್ಗಳಲ್ಲಿ ಒಬ್ಬ ನಟಿ ಬಂದ ನಂತರ ನೂಕುನುಗ್ಗಲಿನಿಂದ ತನ್ನ ಚಪ್ಪಲಿ ಕಳೆದುಕೊಳ್ಳುತ್ತಾನೆ. ಇದನ್ನು ಗಮನಿಸಿದ ಆಲಿಯಾ ತನ್ನ ಕೈಯಾರೆ ಚಪ್ಪಲಿ ಎತ್ತಿಕೊಂಡು ಆತನಿಗೆ ಕೊಡಲು ಮುಂದಾಗಿದ್ದಾರೆ.