ನ್ಯೂಸ್ ನಾಟೌಟ್:ರೈತ ದೇಶದ ಬೆನ್ನೆಲುಬು.ಆತ ನಿರಂತರ ಶ್ರಮ ಪಡುತ್ತಿರುವುದಕ್ಕೆ ಇವತ್ತು ನಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದೇವೆ.ರೈತ ಕೂಡ ಅಷ್ಟೇ ಆತ ದುಡಿಮೆಯಲ್ಲಿ ಏನಾದರೂ ಸಂಪಾದನೆ ಮಾಡಿದರಷ್ಟೆ ಆತ ನಿಶ್ಚಿಂತೆಯಿಂದ ಜೀವನ ನಡೆಸಲು ಸಾಧ್ಯ.ಆದರೆ ಕೆಲವೊಂದು ವೇಳೆ ಕಾಡು ಪ್ರಾಣಿಗಳ ಉಪಟಳದಿಂದಾಗಿ ಆತ ಬೆಳೆದ ಕೃಷಿ ಬೆಳೆಗಳು ನಾಶ ಮಾಡುತ್ತಿದ್ದಾವೆ.ಆದರೆ ಇಲ್ಲೊಂದು ವಿಡಿಯೋದಲ್ಲಿ ರೈತನೊಬ್ಬ ಉಳುತ್ತಿದ್ದ ವೇಳೆ ಹುಲಿಯೊಂದು ಆತನ ಕಣ್ಣೆದುರಲ್ಲೇ ಸುತ್ತಾಡಿದ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
ಹುಲಿಯೊಂದು ಹೊಲದಲ್ಲಿ ತಿರುಗಾಡುತ್ತಿದ್ದ ವೇಳೆ ರೈತನೋರ್ವ ಅದರ ಅರಿವಿಲ್ಲದೆ ತನ್ನ ಪಾಡಿಗೆ ತಾನು ಕೆಲಸದಲ್ಲಿ ತೊಡಗಿರುವ ಘಟನೆ ಉತ್ತರಪ್ರದೇಶದ ಫಿಲಿಬಿತ್ ಜಿಲ್ಲೆಯಲ್ಲಿ ನಡೆದಿದೆ.ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ರಾಜ್ ಲಖಾನಿ ಎಂಬುವವರು ಹಂಚಿಕೊಂಡಿದ್ದಾರೆ. ಭತ್ತದ ಗದ್ದೆಯಲ್ಲಿ ಹುಲಿ ಸುತ್ತಾಡುತ್ತಿರುವುದು ಕಂಡು ಬರುತ್ತದೆ. ಅದರ ಹಿನ್ನಲೆಯಲ್ಲಿ ರೈತ ತನ್ನ ಪಾಡಿಗೆ ತಾನು ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡುತ್ತಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ವೈರಲ್ ವಿಡಿಯೋವನ್ನು ಮಿಲಿಯನ್ಗಟ್ಟಲೆ ಜನ ವೀಕ್ಷಿಸಿದ್ದು ರೈತನ ಧೈರ್ಯವನ್ನು ಕೊಂಡಾಡಿದ್ದಾರೆ. ಕೆಲವರು ಈ ವಿಡಿಯೋ ವೀಕ್ಷಿಸಿ ಕಾಯಕವೇ ಕೈಲಾಸ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಪ್ರಾಣಿ ಹಾಗೂ ಮನುಷ್ಯನ ನಡುವಿನ ಸಂಬಂಧ ಎಂದು ಬಣ್ಣಿಸಿದ್ದಾರೆ.
ಈ ವಿಡಿಯೋ ಕಂಡಾಗ ಭಯಹುಟ್ಟುತ್ತಾದರೂ ಒಂದು ವೇಳೆ ಹುಲಿ ರೈತನ ಬಳಿ ಹೋಗುತ್ತಿದ್ದರೆ ಪರಿಣಾಮ ಏನಾಗುತ್ತಿತ್ತು ಎನ್ನುವ ಪ್ರಶ್ನೆ ಕಾಡದಿರದು.ಆದರೆ ರೈತನೂ ಕೂಡ ಈ ಹುಲಿಯನ್ನು ಗಮನಿಸದೇ ಅವನ ಪಾಡಿಗೆ ಅವನು ಕೆಲಸದಲ್ಲಿ ಮಗ್ನನಾಗಿರುವುದನ್ನು ಕಂಡು ಕಾಯಕವೇ ಕೈಲಾಸವೆಂದು ನೆಟ್ಟಿಗರು ಕಾಮೆಂಟ್ ಮೂಲಕ ತಿಳಿಸಿದ್ದಾರೆ.