ನ್ಯೂಸ್ ನಾಟೌಟ್ : ಇತ್ತಿಚೆಗೆ ಕಾಡಾನೆಗಳ ಉಪಟಳ ಜೋರಾಗಿದೆ.ಕಾಡಿನಿಂದ ನಾಡಿನತ್ತ ಹೆಜ್ಜೆ ಇಡುತ್ತಿರುವ ಕಾಡಾನೆಗಳು ಮನಸೋ ಇಚ್ಛೆ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿರುವ ಬಗ್ಗೆ ವರದಿಯಾಗುತ್ತಲೇ ಇವೆ.ಇದೀಗ ಕಾಡಾನೆ ದಾಳಿಗೆ ಹಸುವೊಂದು ಬಲಿಯಾಗಿರುವ ಬಗ್ಗೆ ವರದಿಯಾಗಿದೆ.
ಈ ಘಟನೆ ನಡೆದಿದ್ದು, ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಕುಡಿಗೆ ಎಂಬಲ್ಲಿ.ಬೋಬೆ ಗೌಡ ಎಂಬುವವರ ತೋಟಕ್ಕೆ ಬಂದಿದ್ದ ಕಾಡಾನೆಯೊಂದು ದಾಳಿ ಮಾಡಿ ಅಲ್ಲೇ ಸಮೀಪದಲ್ಲಿ ಕಟ್ಟಿ ಹಾಕಿದ್ದ ದನದ ಮೇಲೆ ದಾಳಿ ಮಾಡಿದ್ದು, ದನ ಮೃತ ಪಟ್ಟಿದೆ.
ಸ್ಥಳಕ್ಕೆ ಗಸ್ತು ಅರಣ್ಯ ಪಾಲಕ ಯೂಸುಫ್, ಪಶು ವೈದ್ಯ ಪರೀಕ್ಷಕರು ಉದಯ ಕುಮಾರ್ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.