ನ್ಯೂಸ್ ನಾಟೌಟ್:ಆಟ ಆಡುತ್ತಾ ಬಾವಿಗೆ ಬಿದ್ದ ತಂಗಿಯನ್ನು ತನ್ನ ಪ್ರಾಣವನ್ನೇ ಲೆಕ್ಕಿಸದೇ ಬಾವಿಗೆ ಧುಮುಕಿ ರಕ್ಷಿಸಿದ ಘಟನೆ ವರದಿಯಾಗಿದೆ.ಈಕೆಯ ಈ ಸಾಹಸ ಪ್ರದರ್ಶನಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.ಶಾಲು (8) ತಂಗಿಯನ್ನು ರಕ್ಷಿಸಿದ ಅಕ್ಕ. ಈ ಘಟನೆ ವರದಿಯಾಗಿದ್ದು,ತುಮಕೂರು ಜಿಲ್ಲೆಯ ಕುಚ್ಚಂಗಿಪಾಳ್ಯದಲ್ಲಿ.
ಉತ್ತರ ಪ್ರದೇಶ ಮೂಲದ ಜೀತೇಂದ್ರ ಹಾಗೂ ರಾಜಕುಮಾರಿ ದಂಪತಿ ತುಮಕೂರಿನಲ್ಲಿ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದರು. ಆವರಿಗೆ(ಶಾಲು (8), ಹಿಮಾಂಶು (7), ರಾಶಿ (3), ಕಪಿಲ್ (2)ನಾಲ್ವರು ಮಕ್ಕಳು. ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ರಾಶಿ ಕೈಯಲ್ಲಿದ್ದ ಆಟಿಕೆಯನ್ನು ಹಿಮಾಂಶು ಕಿತ್ತುಕೊಳ್ಳಲು ಹೋಗಿದ್ದಾಗ ಆತನಿಂದ ತಪ್ಪಿಸಿಕೊಳ್ಳುವ ಬರದಲ್ಲಿ ರಾಶಿ ಆಯತಪ್ಪಿ ಬಾವಿಗೆ ಬಿದ್ದಿದ್ದಾಳೆ.
ಈ ವೇಳೆ ಸಹೋದರಿಯ ಜೀವವನ್ನು 8 ವರ್ಷದ ಬಾಲಕಿ ಶಾಲು ಎಂಬಾಕೆ ರಕ್ಷಿಸಿದ್ದಾಳೆ.ರಾಶಿ ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಳು.ಇದನ್ನು ಕಂಡ ಶಾಲೂ ಸ್ವಲ್ಪವೂ ಅಂಜದೇ ಧೈರ್ಯವಾಗಿ ಬಾವಿ ನೀರಿಗೆ ಧುಮುಕಿದ್ದಾಳೆ.ಈಕೆ ಬುದ್ದಿವಂತಿಕೆ ಪ್ರದರ್ಶಿಸಿ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ತಂಗಿಯನ್ನು ಕಾಪಾಡಲು ಬಾವಿಗೆ ಹಾರಿದ್ದಾಳೆ.ಈ ವೇಳೆ ಅಲ್ಲಿದ್ದ ಮಕ್ಕಳ ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದವರು ಓಡೋಡಿ ಬಂದು ಶಾಲೂ ಸಹಾಯಕ್ಕೆ ಬಂದಿದ್ದಾರೆ. ಕೂಡಲೇ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ತೋಟದ ಮಾಲೀಕ ಧನಂಜಯ್ಯ ಅವರೊಂದಿಗೆ ಶಾಲೂ ಈಜು ಕಲಿಯಲು ಶುರು ಮಾಡಿದ್ದಳು.ಹೀಗಾಗಿ ಮನೆಯಲ್ಲಿ ಲೈಫ್ ಜಾಕೆಟ್ ಇಟ್ಟುಕೊಂಡಿದ್ದ ಆಕೆ ತಂಗಿ ಬಾವಿಗೆ ಬಿದ್ದೊಡನೆ ಶಾಲೂ ಕ್ಷಣವೂ ಯೋಚಿಸಿದೆ, ಲೈಫ್ ಜಾಕೆಟ್ ಧರಿಸಿ ಕಾಪಾಡಲು ಮುಂದಾದಳು.
ಶಾಲೂ ಸಾಹಸ ಸಾಮಾನ್ಯವಾದದ್ದಲ್ಲ.ಈಕೆಯ ಸಮಯಪ್ರಜ್ಞೆ, ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.