ನ್ಯೂಸ್ ನಾಟೌಟ್ : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬೆಳಗಾವಿಯ ಗಣಾಚಾರಿ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ಎಜುಕೇಷನ್ ಸೊಸೈಟಿಗೆ ಸೇರಿದ ಶಾಲಾ ವಾಹನ ಶುಕ್ರವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದಿದೆ.
ಶಾಲಾ ವಾಹನದಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಮಕ್ಕಳನ್ನು ಕರೆದೊಯ್ಯದ್ದದ್ದೆ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ವಾಹನದಲ್ಲಿ 37 ಮಕ್ಕಳನ್ನು ತುಂಬಿಸಿಕೊಂಡು ಹಾರೂಗೊಪ್ಪ ಗ್ರಾಮದಿಂದ ಮರಕುಂಬಿ ಗ್ರಾಮದಲ್ಲಿರುವ ಗಣಾಚಾರಿ ಶಾಲೆಗೆ ಕರೆತರುವಾಗ ಈ ಘಟನೆ ನಡೆದಿದೆ. ಪುಟ್ಟ ವಾಹನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ ಆರೋಪ ಕೇಳಿ ಬಂದಿದ್ದು, ಎಲ್ಲ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ವಾಹನ ಪಲ್ಟಿಯಾಗುತ್ತಿದ್ದಂತೆ ಓಡಿ ಹೋಗಿ ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಣ್ಣ ಪುಟ್ಟ ಗಾಯದಿಂದ ಪ್ರಾಣಾಪಾಯದಿಂದ ಎಲ್ಲ ಮಕ್ಕಳು ಪಾರಾಗಿದ್ದಾರೆ. ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
FB PAGE : https://www.facebook.com/NewsNotOut2023
Insta : https://www.instagram.com/newsnotout/
Tweet : https://twitter.com/News_Not_Out
YouTube : https://www.youtube.com/@newsnotout8209