ನ್ಯೂಸ್ ನಾಟೌಟ್ : ಕೆ. ಎಸ್ ಆರ್ ಟಿ ಸಿ ಬಸ್ ಟಿಕೇಟ್ ಮೆಷಿನ್ ಹಾಳಾದ ಕಾರಣ ಖಾಸಗಿ ಬಸ್ ಗಳಂತೆ ಚೀಟಿಯಲ್ಲಿ ಬರೆದು ಟಿಕೆಟ್ ವಿತರಿಸಲು ಕಂಡೆಕ್ಟರ್ ಪರದಾಡಿದ ಘಟನೆ ಇಂದು(ಜುಲೈ 14) ಸುಳ್ಯ – ಕೊಯನಾಡು ಬಸ್ ನಲ್ಲಿ ನಡೆಯಿತು.
ಇತ್ತೀಚೆಗೆ ಮಹಿಳೆಯರಿಗೆ ಫ್ರೀ ಬಸ್ ಬಂದಾಗಿನಿಂದ ಇತರರಿಗೆ ಮತ್ತು ಮಹಿಳೆಯರಿಗೆ ಕೊಡುವ ಟಿಕೇಟ್ ಗಳು ಹಲವು ಬದಲಾವಣೆಗಳನ್ನು ಹೊಂದಿವೆ. ಈ ಹಿಂದೆ ಆಕಸ್ಮಿಕವಾಗಿ ಟಿಕೇಟ್ ಮೆಷಿನ್ ಕೈ ಕೊಟ್ಟಾಗ ಬದಲಿ ವ್ಯವಸ್ಥೆ ಅಥವಾ ನಿರ್ವಾಹಕರೇ ರಿಪೇರಿ ಮಾಡಿಕೊಳ್ಳುತ್ತಿದ್ದರು.
ಆದರೆ ಈಗ ಉಚಿತ ಪ್ರಯಾಣದ ಟಿಕೇಟ್ ಬೇರೆಯಾಗಿದ್ದು ಮೆಷಿನ್ ಹಾಳಾದ ಪರಿಣಾಮ ಬರೆದು ಕೊಡುವ ಬದಲಿ ಚೀಟಿಗಳಿದ್ದರೂ ಬರದಾಡುವ ಪರಿಸ್ಥಿತಿ ಸುಳ್ಯ – ಕೊಯನಾಡು ಬಸ್ ನಲ್ಲಿ ಸೃಷ್ಠಿಯಾಯಿತು, ಉಚಿತ ಬಸ್ ಟಿಕೇಟ್ ಕೊಡುವಾಗ ಅದರ ವಿತರಣೆಯ ಲೆಕ್ಕ ಇರಿಸಿಕೊಳ್ಳಬೇಕಾದ ಕಾರಣ ಈ ಗೊಂದಲ ಸೃಷ್ಠಿಯಾಗಿತ್ತು. ಅತಿಯಾದ ಜನ ಸಂಧಣಿ ಇರುವ ಕಾರಣ ಮತ್ತು ಪ್ರತೀ ಟಿಕೇಟ್ ಗಳನ್ನು ಸಹಿ ಮಾಡಿ ಉಚಿತ ಬೇರೆ, ಇತರರಿಗೆ ಬೇರೆ ಕೊಡಲು ಕಷ್ಟವಾದ ಕಾರಣ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಠಿಯಾಗಿತ್ತು. ಕೊನೆಗೆ ಬದಲಿಗೆ ಖಾಸಗಿ ಬಸ್ ಗಳಂತೆ ಚೀಟಿಯನ್ನು ಬಳಸಿ ಟಿಕೇಟ್ ವಿತರಿಸಿದ ಘಟನೆ ನಡೆದಿದೆ.